ಕುಮಟಾ : ಇಲ್ಲಿನ ಉಪಖಜಾನೆಯಲ್ಲಿ ಪ್ರಭಾರಿ ಸಹಾಯಕ ನಿರ್ದೇಶಕರಾಗಿದ್ದು, ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದ ರಾಜೇಶ ಡಿ. ನಾಯ್ಕ ವರ್ಗಾವಣೆ ಹಿನ್ನೆಲೆಯಲ್ಲಿ, ಸಹಾಯಕ ನಿರ್ದೇಶಕರಾಗಿ ಸಂದೀಪ ಪಿ. ಮಾಳಗಿ ಯವರು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಕುಮಟಾ ತಾಲೂಕಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದ ಸದಸ್ಯರು, ನಿರ್ಗಮಿತ ಪ್ರಭಾರಿ ಸಹಾಯಕ ನಿರ್ದೇಶಕ ರಾಜೇಶ ಡಿ ನಾಯ್ಕ ರವರಿಗೆ ಸನ್ಮಾನಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಉಪಖಜಾನೆಯ ಸಹಾಯಕ ನಿರ್ದೇಶಕ ಸಂದೀಪ ಪಿ. ಮಾಳಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಂಜುನಾಥ ಟಿ. ನಾಯ್ಕ, ಸಾಂಸ್ಕೃತಿಕ ಕಾರ್ಯದರ್ಶಿ ವಿನಾಯಕ ಎಸ್. ಭಂಡಾರಿ ಹಾಗೂ ಉಪಕಖಜಾನೆಯ ಸಿಬ್ಬಂದಿಗಳಾದ ರವಿಕುಮಾರ ಡಿ. ಶೆಟ್ಟಿ, ಮಾರುತಿ ಆರ್. ದೀಪಾವಳಿ, ಯುವರಾಜ ಚವ್ಹಾಣ ಹಾಗೂ ಮಂಜುನಾಥ ಜೆ. ನಾಯ್ಕ ಹಾಜರಿದ್ದರು.