ಕುಮಟಾ :  ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೆನರಾ ಕಾಲೇಜ್ ಸೊಸೈಟಿಯ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ರಾಮಚಂದ್ರ ರಂಗಪ್ಪ ಕಾಮತ, ಬೆಂಗ್ರೆ, ಉಪಾಧ್ಯಕ್ಷರಾಗಿ ದಿನಕರ ಮಾಧವ ಕಾಮತ, ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಹನುಮಂತ ಕೃಷ್ಣ ಶಾನಭಾಗ ಹಾಗೂ ಸಂಸ್ಥೆಯ ಕಾರ್ಯದರ್ಶಿಯಾಗಿ ಯಶವಂತ ವೆಂಕಟೇಶ ಶಾನಭಾಗ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರುಗಳನ್ನು ಸದಸ್ಯರು ಆಯ್ಕೆ ಮಾಡಿದರು.

RELATED ARTICLES  ಸಿಕ್ಕಿರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು: ಎನ್ ಆರ್ ಮುಕ್ರಿ.

ಅಂತೆಯೇ ಆಡಳಿತ ಮಂಡಳಿಯ ಸದಸ್ಯರಾಗಿ ವಾಸುದೇವ ಹನುಮಂತ ನಾಯಕ ಬೆಣ್ಣೆ, ನಾರಾಯಣ ರಾಮದಾಸ ಶಾನಭಾಗ, ಅತುಲ್ ವಿಷ್ಣು ಕಾಮತ, ಮುರಲೀಧರ ಯಶವಂತ ಪ್ರಭು, ಹರೀಶ ಬಾಲಕೃಷ್ಣ ಗೋಳಿ, ಪವನಕುಮಾರ ವಿನೋದ ಪ್ರಭು ಹಾಗೂ ರವಿಕಾಂತ ಶ್ರೀನಿವಾಸ ಕಾಮತ ಇವರು ಆಯ್ಕೆಯಾಗಿದ್ದಾರೆ, 

ಇನ್ನು ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಅನಂತ ಪಿ. ಶಾನಭಾಗ, ರತ್ನಾಕರ ಭಿಕ್ಕು ಕಾಮತ, ವಸಂತ ಪಾಂಡುರಂಗ ಶಾನಭಾಗ, ಜಯಶ್ರೀ ವಿ. ಕಾಮತ, ವೆಂಕಟರಮಣ ಸಾಂತಪ್ಪ ನಾಯಕ, ವೆಂಕಟೇಶ ಅನಂತ ಶಾನಭಾಗ, ಡಾ. ಅಶೋಕ ಕೃಷ್ಣ ಭಟ್ಟ, ಜೀವನ ವೆಂಕಟರಮಣ ಕವರಿ, ಕಿರಣ ಕಾಶಿನಾಥ ನಾಯಕ, ಸಂದೀಪ ವಿಠ್ಠಲ ನಾಯಕ, ಮುರಲೀಧರ ಮಾಧವ ಭಟ್ಟ, ಡಾ. ವಿವೇಕ ಮರ್ತು ಪೈ ಹಾಗೂ ಸುರೇಶ ವೆಂಕಟೇಶ ಭಟ್ಟ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

RELATED ARTICLES  ಹಳದಿಪುರ ಅಗ್ರಹಾರದಲ್ಲಿ ರಾತ್ರಿ ವೇಳೆಯಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ