ಬೆಂಗಳೂರು: ಅಕ್ಟೋಬರ್ 13ರಂದು ದೇಶಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಇದೀಗ ಮುಷ್ಕರವನ್ನು ಕೈಬಿಟ್ಟಿದ್ದಾರೆ.
ತೈಲ ಕಂಪನಿಗಳು ಮಾತುಕತೆಗೆ ಮುಂದಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಮಿಷನ್ ಹೆಚ್ಚಳ ಮತ್ತು ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ನಾಳೆ ಮಧ್ಯರಾತ್ರಿಯಿಂದಲೇ ಮುಷ್ಕರ ನಡೆಸಲು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್(ಯುಪಿಎಫ್) ತೀರ್ಮಾನಿಸಿತ್ತು.

RELATED ARTICLES  ದೂರು ನೀಡಲು ಬಂದಿದ್ದ ಪತ್ನಿಗೆ ಥಳಿಸಿದ ಗಂಡ.!

ಪ್ರತಿ ಆರು ತಿಂಗಳಿಗೊಮ್ಮೆ ವಿತರಕರಿಗೆ ನೀಡುವ ಕಮಿಷನ್ ದರ ಪರಿಷ್ಕರಣೆ, ಕಾರ್ಮಿಕರು, ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಷ್ಟ ನಿರ್ವಹಣೆ ಮೊತ್ತ ನೀಡಬೇಕು ಎಂಬ ಒಪ್ಪಂದ 2016ರ ನವೆಂಬರ್ ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಮತ್ತು ವಿತರಕರ ಮಧ್ಯೆ ನಡೆದಿತ್ತು. ಆದರೆ ತೈಲ ಕಂಪೆನಿಗಳು ಈ ಎಲ್ಲಾ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಯುಪಿಎಫ್ ಮುಷ್ಕರ ಹೂಡಲು ಮುಂದಾಗಿತ್ತು.

RELATED ARTICLES  ಕಳೆದ ಎರಡು ಮೂರು ವಾರಕ್ಕಿಂತ ಹೆಚ್ಚಿತು ಇಂದಿನ ಕೊರೋನಾ ಪ್ರಕರಣ