ಬೆಂಗಳೂರು: ಹಾಸನ ಲೋಕಸಭಾ ಸದಸ್ಯ, ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವಕೀಲ ದೇವರಾಜೇಗೌಡ ಅವರು ಪ್ರಜ್ವಲ್ ರೇವಣ್ಣ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇಂದು ಇದರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಪೀಠ, ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ.
ಹೈಕೋರ್ಟ್ ತೀರ್ಪಿಗೆ ತಲೆಬಾಗುವೆ.
ಹೈಕೋರ್ಟ್ ತೀರ್ಪಿಗೆ ತಲೆಬಾಗುವೆ. ತೀರ್ಪಿನ ಪ್ರತಿ ಬಂದ ನಂತರ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಜೆಡಿಎಸ್ ಶಾಸಕ, ಪ್ರಜ್ವಲ್ ತಂದೆ ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದರು.
ಅರ್ಜಿದಾರರಾದ ಎ.ಮಂಜು ಅವರು ಈಗ ಜೆಡಿಎಸ್ ಶಾಸಕರಾಗಿದ್ದಾರೆ. ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ತಪ್ಪು ಮಾಹಿತಿಯ ಪ್ರಮಾಣಪತ್ರವನ್ನು ಪ್ರಶ್ನಿಸಿ ದಾಖಲಿಸಿಲಾಗಿದ್ದ ಪ್ರಕರಣವಿದು. ಪ್ರಮಾಣಪತ್ರ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಬಾರದು ಎಂಬ ಪಾಠ ತೀರ್ಪಿನಿಂದ ದೊರೆತಿದೆ ಎಂದರು.
ಇದು ಸತ್ಯಕ್ಕೆ ಸಂದ ನ್ಯಾಯ ಎಂದು ಅರ್ಜಿದಾರ ಹಾಗೂ ಶಾಸಕ ಎ.ಮಂಜು ಪ್ರತಿಕ್ರಿಯಿಸಿದರು.
‘ನಾನು ಈಗ ಜೆಡಿಎಸ್‌ನೊಂದಿಗೆ ಇದ್ದೇನೆ. ಆದರೆ, ಪ್ರಕರಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ತೀರ್ಪಿನ ಪ್ರತಿ ಬಂದ ನಂತರ ಏನು ಮಾಡಬೇಕು ಎಂದು ಪಕ್ಷದ ನಾಯಕರ ಜತೆ ಚರ್ಚಿಸಿ, ನಿರ್ಧರಿಸುತ್ತೇವೆ’ ಎಂದರು.