ಫೋನ್ ಕರೆ ಮಾಡಲು ಫೋನ್ ನಂಬರ್ ಇಲ್ಲದೇ ಕರೆ ಮಾಡಬಹುದು..! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ, ನೀವು ಎಕ್ಸ್ (ಟ್ವಿಟರ್‌) ವೇದಿಕೆಯಲ್ಲಿ ಖಾತೆ ಹೊಂದಿರಬೇಕಾಗುತ್ತದೆ. ಎಕ್ಸ್‌ ಮಾಲೀಕ ಎಲಾನ್ ಮಸ್ಕ್ ಅವರು, ತಮ್ಮ ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ ಮತ್ತು ಆಡಿಯೋ ಕಾಲ್ ಫೀಚರ್ ಒದಗಿಸುವುದಾಗಿ ಪ್ರಕಟಿಸಿದ್ದಾರೆ. ಎಲಾನ್ ಮಾಸ್ಕ್ ತಮ್ಮ ಮಾಲೀಕತ್ವದ ಟ್ವಿಟ್ಟರ್ ಸಂಸ್ಥೆಯ ಹೆಸರು ಮತ್ತು ಲೋಗೋವನ್ನ ಬದಲಿಸಿ ಸಂಚಲನ ಸೃಷ್ಟಿಸಿದ್ದರು. ಟ್ವಿಟ್ಟರ್ ಹೆಸರನ್ನ X ಎಂದು ಬದಲಿಸಿದ್ದರು. ಇದೀಗ ಎಕ್ಸ್​​ ಮೂಲಕ ವಾಟ್ಸಾಪ್​ಗೆ ಸೆಡ್ಡು ಹೊಡೆಯಲು ಅವರು ಮುಂದಾಗಿದ್ದಾರೆ.

RELATED ARTICLES  ಬುಧವಾರ ಕುಮಟಾದ ಹಲವೆಡೆ ವಿದ್ಯುತ್ ವ್ಯತ್ಯಯ

ಶೀಘ್ರದಲ್ಲೇ X ಮೂಲಕ ಬಳಕೆದಾರರು ವೀಡಿಯೊ, ಆಡಿಯೋ ಕರೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಆದರೆ ಈ ಹೊಸ ಫೀಚರ್ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
X ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ. X ಮೂಲಕ ಬಳಕೆದಾರರು ವೀಡಿಯೊ ಹಾಗೂ ಆಡಿಯೋ ಕಾಲ್ ಮಾಡಬಹುದು. ಈ ವಿಶೇಷ ವೈಶಿಷ್ಟ್ಯಕ್ಕೆ ಯಾವುದೇ ಫೋನ್ ನಂಬರ್ ಅಗತ್ಯವಿಲ್ಲ. ಯಾರಿಗೆ ಕರೆ ಮಾಡಬೇಕು, ಅವರ X ಖಾತೆ ಕ್ಲಿಕ್ ಮಾಡಿ ಆಡಿಯೋ ಅಥವಾ ವೀಡಿಯೊ ಕರೆಯನ್ನು ಆಯ್ಕೆ ಮಾಡಿಕೊಂಡರೆ ಸಾಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

RELATED ARTICLES  ಇಸ್ರೊದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ