ಕುಮಟಾ : ಕರ್ನಾಟಕ ಸರ್ಕಾರ, ಜಲಾನಯನ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಹಳದೀಪುರ ಅಗ್ರೋ ಫಾರ್ಮರ್ಸ ಪ್ರೊಡ್ಯೂಸರ್ ಕಂಪನಿ ವತಿಯಿಂದ ಭತ್ತ, ಅಡಿಕೆ ಮತ್ತು ಶೇಂಗಾ ಬೆಳೆಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ತಾಲೂಕಿನ ಬಡಗಣಿಯ ಆರ್. ಬಿ. ಹೆಗಡೆಯವರ ಮನೆ ಆವರಣದಲ್ಲಿ ಸಂಪನ್ನವಾಯಿತು.

ಕೃಷಿ ವಿಶ್ವವಿದ್ಯಾಲಯ ಧಾರವಾಡದ ನಿವೃತ್ತ ಪ್ರಾಧ್ಯಾಪಕ ಡಾ. ಜಿ. ವಿ. ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಳೆಯ ಸಮಸ್ಯೆಯಿಂದಾಗಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಭತ್ತ ಬೆಳೆ, ಅಡಿಕೆ, ಶೇಂಗಾ ಬೆಳೆಗಳ ನಿರ್ವಹಣೆ ಸೂಕ್ತವಾಗಿ ಆದಲ್ಲಿ ಉತ್ತಮ ಫಸಲು ಪಡೆಯಲು ಸಾಧ್ಯ. ಹೀಗಾಗಿ ಅವುಗಳ ಕುರಿತಾಗಿ ತರಬೇತಿ ಅತ್ಯಗತ್ಯವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.

RELATED ARTICLES  ಹೊನ್ನಾವರದಲ್ಲಿಯೂ ಜಾತ್ರಾ ಮಳಿಗೆ ಹರಾಜು ವಿವಾದ..?

ಕೃಷಿ ಇಲಾಖೆ ಹೊನ್ನಾವರ ಇದರ ಸಹಾಯಕ ನಿರ್ದೇಶಕಿ ಪುನಿತಾ ಎಸ್. ಬಿ, ರೈತ ಸಂಪರ್ಕ ಕೇಂದ್ರ ಹೊನ್ನಾವರದ ಕೃಷಿ ಅಧಿಕಾರಿ ಲಕ್ಷ್ಮಿ ಎಸ್ ದಳವಾಯಿ, ಸ್ಕೋಡ್ ವೆಸ್ ಶಿರಸಿಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಅತಿಥಿಗಳಾಗಿ ಹಾಜರಿದ್ದರು.

RELATED ARTICLES  ರೈಸ್ ಮಿಲ್‌ವೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ

ಹಳದೀಪುರ ಅಗ್ರೋ ಫಾರ್ಮರ್ ಪ್ರೊಡ್ಯೂಸರ ಕಂಪನಿ, ಹಳದಿಪುರ ಇದರ ಅಧ್ಯಕ್ಷ ಬಿ. ಆರ್. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯ ನಿರ್ವಾಹಕಿ ಆಶಾ ಭಟ್ಟ ಸ್ವಾಗತಿಸಿದರು. ಆರ್.ಬಿ ಹೆಗಡೆ ವೇದಿಕೆಯಲ್ಲಿದ್ದರು.

ನೂರಕ್ಕೂ ಹೆಚ್ಚು ರೈತರು ಭತ್ತ, ಅಡಿಕೆ ಮತ್ತು ಶೇಂಗಾ ಬೆಳೆಗಳ ನಿರ್ವಹಣೆಯ ಕುರಿತು ತರಬೇತಿ ಪಡೆದುಕೊಂಡರು.