ಸಿದ್ದಾಪುರ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ತಾಲೂಕಿನ ಇಟಗಿಯಲ್ಲಿ ನಡೆದಿದೆ. ಹೊನ್ನೇಗಟಗಿ ಕಡೆಯಿಂದ ಬಿಳಿಗಿ ಕಡೆ ಹೋಗುತ್ತಿದ್ದ ಕಾರಿನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಗಾಯ ನೋವುಗಳು ಸಂಭವಿಸಿಲ್ಲ. ವಿಷಯ ತಿಳಿದ ಸ್ಥಳೀಯ ಸಾರ್ವಜನಿಕರು ವಾಹನವನ್ನು ಮೇಲಕ್ಕೆತ್ತಲು ಸಹಕಾರ ನೀಡಿದ್ದು ಯಾವುದೇ ಹೆಚ್ಚಿನ ಹಾನಿಯಾಗದಂತೆ ವಾಹನವನ್ನು ಮೇಲಕ್ಕೆತ್ತಲಾಗಿದೆ. ಘಟನೆಯಿಂದ ವಾಹನದ ಬಿಡಿ ಭಾಗಗಳಿಗೆ ಹಾನಿ ಉಂಟಾಗಿದೆ.