ಕುಮಟಾ : ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ ಹಿಂದೂ ದೇವರುಗಳಾದ ಗಣಪತಿ, ಈಶ್ವರ, ಕೃಷ್ಣ, ಶ್ರೀ ರಾಮನ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿ ನಿಂದನೆ ಮಾಡಿ ಮಾತನಾಡಿರುವ ವಿಡಿಯೋ ವೈರಲ್ ಆಗಿ ಇದೀಗ ಎಲ್ಲೆಡೆ ಅವರ ವಿರುದ್ಧ ಪ್ರತಿಭಟನೆಗಳು ಹಾಗೂ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಹೆಚ್ಚುತ್ತಿದೆ.
ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟ ಹಿಂದೂ ದೇವರುಗಳ ಕುರಿತಾಗಿ, ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎಂದು ನಿವೃತ್ತ ಪೋಲೀಸ್ ಅಧಿಕಾರಿ ಎನ್.ಆರ್.ಮುಕ್ರಿ ಆಗ್ರಹಿಸಿದ್ದಾರೆ.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲಿಷಾ ಎಲಕಪಾಟಿ ದೇಶದಲ್ಲಿ ಅಶಾಂತಿ ಮೂಡಿಸಿ ಕೋಮು ಗಲಭೆಯಂತಹ ಕೃತ್ಯವನ್ನು ಎಸಗಲು ಮುಂದಾಗಿರುವಂತೆ ಭಾಸವಾಗುತ್ತದೆ. ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದಗಳನ್ನು ಪ್ರಯೋಗಿಸಿ, ಒಂದು ಕೋಮಿನ ಬಗ್ಗೆ ಧ್ವೇಷ ಭಾವನೆಯ ವೀಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಈ ವರ್ತನೆಯು ಖಂಡನೀಯವಾಗಿದೆ.
ಹಿಂದುಗಳು ಆರಾಧಿಸುವ ಶಿವನಿಗೆ ಅಸಂಬದ್ಧ ಶಬ್ದದಿಂದ ಬೈದಿದ್ದು, ರಾಷ್ಟ್ರ ನಾಯಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ಯೋಗಿ ಆದಿತ್ಯನಾಥರಿಗೂ ಕೂಡ ತುಚ್ಛ ಶಬ್ದವನ್ನು ಬಳಸಿ ಬಾಯಿಗೆ ಬಂದಂತೆ ಅವಹೇಳನಕಾರಿ ಮಾತನಾಡುತ್ತಾನೆ. ಅಶ್ಲೀಲ ಪದ ಬಳಕೆ ಮಾಡಿ ಮಾತನಾಡಿದಾನೆ. ಮುಗ್ಧ ಹಿಂದುಗಳನ್ನು ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವ ಉದ್ದೇಶದಿಂದ ಈ ಪ್ರಕ್ರಿಯೆ ಕೈಗೊಂಡಂತಿದೆ. ಸಾಮರಸ್ಯದಿಂದ ಬದುಕು ಸಾಗಿಸುತ್ತಿರುವವರ ಮಧ್ಯೆ ದ್ವೇಷದ ವಿಷ ಬೀಜ ಬಿತ್ತುವ ಇಂತವರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಕ್ರಿ ಸಂಘದ ಜಿಲ್ಲಾಧ್ಯಕ್ಷ ರವಿ ಮುಕ್ರಿ, ಪುರಸಬಾ ಸದಸ್ಯೆ ಗೀತಾ ಮುಕ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಕೋಡಿಬಾಗಿಲ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಕಾಂತ ಮುಕ್ರಿ, ಪ್ರಮುಖರಾದ ತಿಮ್ಮಪ್ಪ ಮುಕ್ರಿ, ಗೋಪಾಲ ಮುಕ್ರಿ, ಕಮಲಾಕರ ಮುಕ್ರಿ, ಮಹೇಶ ಮುಕ್ರಿ, ಯಶವಂತ ಮುಕ್ರಿ, ಮಂಜುನಾಥ ಮುಕ್ರಿ ಇತರರು ಇದ್ದರು.
ಎಲಿಷಾ ಎಲಕಪಾಟಿ ಮೂಲತಃ ತಮಿಳಾನಾಡಿನವನೆಂದು ತಿಳಿದುಬಂದಿದ್ದು, ಇವನು ಪರಿಶಿಷ್ಠ ಜಾತಿಯವನೋ ಅಥವಾ ಕ್ರಿಶ್ಚಿಯನ್ನ ಜಾತಿಗೆ ಸೇರಿದವನೆಂದು ತಿಳಿಯಬೇಕಾಗಿದೆ. ದಲಿತ ರಕ್ಷಣಾ ವೇದಿಕೆಯ ಮುಖಂಡನೆಂದು ಹೇಳಿಕೊಂಡು, ದಲಿತರ ಎಲ್ಲಾ ಸೌಲಭ್ಯವನ್ನು ಅಕ್ರಮವಾಗಿ ಪಡೆದಂತಿದೆ. ಇವನು ಪರಿಶಿಷ್ಟ ಜಾತಿಯವನು ಅಲ್ಲದೆ ಹೋದಲ್ಲಿ, ಪರಿಶಿಷ್ಟ ಜಾತಿಯ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಇವನ ಮೇಲೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. – ಎನ್. ಆರ್ ಮುಕ್ರಿ ನಿವೃತ್ತ ಪೋಲೀಸ್ ಅಧಿಕಾರಿ