ಭಟ್ಕಳ: ರಸ್ತೆ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರವಾರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ತಾಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಭಟ್ಕಳ ಶಿಫಾ ಕ್ರಾಸ್ ಬಳಿಯ ನಿವಾಸಿ ಮುಹಮ್ಮದ್ ಸಮಿಯನ್ ಗಂಗಾವಳಿ (32) ಹಾಗೂ ಗಾಯಗೊಂಡ ಯುವಕನನ್ನು ತನ್ವೀರ್ ಅಹಮದ್ ಎಂದು ಗುರುತಿಸಲಾಗಿದೆ.
ಯುವಕರಿಬ್ಬರು ಯಾವುದೋ ಕೆಲಸದ ನಿಮಿತ್ತ ಭಟ್ಕಳದಿಂದ ಕಾರವಾರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಏಕಾಏಕಿ ಪ್ರಾಣಿಯೊಂದು ಅಡ್ದ ಬಂದಿದ್ದು ಬೈಕ್ ನಲ್ಲಿದ್ದ ಇಬ್ಬರೂ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಇಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ದಾರಿಯಲ್ಲಿದ್ದ ಜನರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಓರ್ವ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.