ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ರವೀಶ ಹೆಗಡೆಯವರನ್ನು ಸದರಿ ಹುದ್ದೆ ಮತ್ತು ಜವಾಬ್ದಾರಿಯಿಂದ ಕಡಿಮೆಗೊಳಿಸಲಾಗಿದೆ ಎಂದು ನೂತನ ಆಡಳಿತ ಮಂಡಳಿ ತಿಳಿಸಿದೆ.

ಈ ಕುರಿತು ಟಿಎಸ್ಎಸ್ ತನ್ನ ವಾಟ್ಸಾಪ್ ಗ್ರುಪ್ ಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಅದರ ಯಥಾವಥ್ ವರದಿ ಇಲ್ಲಿದೆ. “ಸಂಘದ ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿದ್ದ ಶ್ರೀ ರವೀಶ ಅಚ್ಯುತ ಹೆಗಡೆ ಅವರನ್ನು ದಿನಾಂಕ : 04.09.2023 ರಿಂದ ಜಾರಿಗೆ ಬರುವಂತೆ ಪ್ರಧಾನ ವ್ಯವಸ್ಥಾಪಕ ಹುದ್ದೆಯ ಜವಾಬ್ದಾರಿ ಮತ್ತು ಅಧಿಕಾರಗಳಿಂದ ಕಡಿಮೆಗೊಳಿಸಲಾಗಿದೆ. ಅವರ ಮೇಲಿನ ಆಪಾದನೆಗಳು ಹಾಗೂ ಆಕ್ಷೇಪಣೆಗಳ ಕುರಿತು ಆಡಳಿತ ಮಂಡಳಿಯು ಸೂಕ್ತ ತನಿಖೆ ನಡೆಸಲಿದ್ದು, ಸದರಿ ತನಿಖೆಯು ಪೂರ್ಣಗೊಳ್ಳುವವರೆಗೆ ಯಾರೂ ಕೂಡ ಅವರೊಂದಿಗೆ ಸಂಘಕ್ಕೆ ಸಂಬಂಧಿಸಿದ ಯಾವುದೇ ವ್ಯಾವಹಾರಿಕ ಸಂಬಂಧಗಳನ್ನು ಹೊಂದಬಾರದಾಗಿ ಈ ಮೂಲಕ ತಿಳಿಸುತ್ತಿದ್ದೇವೆ. ಒಂದುವೇಳೆ ಯಾರೇ ಯಾವುದೇ ವ್ಯವಹಾರ ವಹಿವಾಟುಗಳನ್ನು ನಡೆಸಿದಲ್ಲಿ ಅದು ಸಂಘಕ್ಕೆ ಸಂಬಂಧಿಸಿರುವುದಿಲ್ಲ ಹಾಗೂ ಸಂಘಕ್ಕೆ ಯಾವುದೇ ರೀತಿಯಲ್ಲೂ ಬಾಧಿಸುವುದಿಲ್ಲ.
ಆಡಳಿತ ಮಂಡಳಿಯ ಆದೇಶದ ಮೇರೆಗೆ…
ಪ್ರಭಾರಿ ಪ್ರಧಾನ ವ್ಯವಸ್ಥಾಪಕ
(ವಿಜಯಾನಂದ ಎಸ್ ಭಟ್)
*_TSS Sirsi_*
04-09-2023″
 ಸೋಮವಾರ ಸಂಘದ ಕಛೇರಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ವಾಯುಪಡೆ ನೇಮಕಾತಿ ರ್ಯಾಲಿಯಲ್ಲಿ ನೀವು ಭಾಗವಹಿಸಬೇಕೆ? ಹಾಗಾದರೆ ಇದೆ ಅವಕಾಶ.