ಕುಮಟಾ : ತಾಲೂಕಿನ ಹೆಗಡೆಯ ಮೋಜಿನಕೇರಿಯ ನಿವಾಸಿಯಾದ ವಿಷ್ಣು ಗೋಪಾಲ ಪಟಗಾರ ಇವರು ಮನೆಯ ಗಿಲಾಯಿ ಮಾಡುವ ಸಂದರ್ಭದಲ್ಲಿ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅವರಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ ಒಕ್ಕಲು ಯುವ ಬಳಗದವರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅವರಿಗೆ ರೂ. 7,500 ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ವ್ಯಕ್ತಿ ಬೇಗ ಗುಣಮುಖರಾಗಲಿ ಎಂದು ಹಾರೈಸಿದ ಬಳಗದ ಸದಸ್ಯರು ಅವರಿಗೆ ನೈತಿಕ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಹಾಗೂ ಸ್ಥಳೀಯ ಯುವ ಬಳಗದ ಸದಸ್ಯರು ಹಾಜರಿದ್ದರು. ಕಷ್ಟದ ಸಮಯದಲ್ಲಿ ಪರಿಹಾರ ನಿಧಿಯನ್ನು ನೀಡಿದ ಯುವ ಬಳಗದವರಿಗೆ ಅಲ್ಲಿಯ ಸ್ಥಳೀಯರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.