ಕುಮಟಾ : ಬಾಡ ವಲಯದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಚಿತ್ರಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಪ್ರತಿಮ ಪ್ರದರ್ಶನ ತೋರಿರುತ್ತಾರೆ. ಸ್ಪಂದನಾ ರಾಜು ನಾಯಕ- ಭರತನಾಟ್ಯ, ನಿವೇದಿತಾ ರವಿರಾಜ್ ಕಡ್ಲೆ- ಭಾವಗೀತೆ, ವೈಷ್ಣವಿ ಏಕನಾಥ ನಾಯ್ಕ- ಛದ್ಮವೇಶ, ನವ್ಯಾ ದಾಮೋದರ ನಾಯ್ಕ- ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಶ್ರೇಯಾಂಕ ಗಳಿಸಿದರೆ, ಶ್ರೀಶಾಂತ ಶ್ರೀನಿವಾಸ ಆಚಾರಿ- ಚಿತ್ರಕಲೆ, ಪ್ರಜ್ವಲ ಗಣೇಶ ಆಚಾರಿ- ಮಿಮಿಕ್ರಿ, ಶರಣ್ಯಾ ನಾಗೇಶ ಭಟ್- ಕವನ ವಾಚನ, ವಿಘ್ನೇಶ ವಿನಾಯಕ ಭಟ್ – ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಶ್ರೇಯಾಂಕವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಅರ್ಹತೆ ಗಳಿಸಿರುತ್ತಾರೆ.
ಭೂಮಿಕಾ ನಾಗರಾಜ ನಾಯ್ಕ- ಕನ್ನಡ ಭಾಷಣ, ನೈತಿಕ ನಾಗರಾಜ ಆಚಾರಿ -ಇಂಗ್ಲೀಷ ಭಾಷಣ, ಸುಮನಾ ರಫೀಕ್ ಸಾಬ್- ಹಿಂದಿ ಭಾಷಣ, ಭಾವನಾ ಸದಾನಂದ ಪಟಗಾರ- ರಂಗೋಲಿ ಸ್ಪರ್ಧೆಗಳಲ್ಲಿ ತೃತೀಯ ಶ್ರೇಯಾಂಕವನ್ನು ಗಳಿಸಿ ಪ್ರಶಸ್ತಿ ಪತ್ರಕ್ಕೆ ಭಾಜನರಾಗಿರುತ್ತಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಸುದೇವ ಪ್ರಭು ಹಾಗೂ ಸದಸ್ಯರುಗಳು, ಮುಖ್ಯಾಧ್ಯಾಪಕರು, ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಪಾಲಕರು ಶುಭ ಹಾರೈಸಿದ್ದಾರೆ.