ಯಲ್ಲಾಪುರ ತಾಲ್ಲೂಕು ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಖ್ಯಾತ ವ್ಯಂಗ್ಯ ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಸೀತಾರಾಮ ಹೆಗಡೆ(ನೀರ್ನಳ್ಳಿ ಗಣಪತಿ) ಯವರಿಗೆ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ವ್ಯಂಗ್ಯ ಚಿತ್ರಕಲಾವಿದರಾಗಿ ಬೆಳೆದು ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ರಾಮಕಥೆಯಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದ “ಕುಂಚಕವಿ”ಯಾಗಿ ಅರಳಿದ ನೀರ್ನಳ್ಳಿಯವರು ಗೀತರಾಮಾಯಣದ ಸರಣಿ ಕಾರ್ಯಕ್ರಮಗಳಲ್ಲೂ ‘ಗೀತ-ಕುಂಚ’ ಕಲಾವಿದರಾಗಿ ಹೆಸರು ಪಡೆದಿರುತ್ತಾರೆ.

RELATED ARTICLES  ಸೇಬುಹಣ್ಣು ತುಂಬಿದ್ದ ಲಾರಿ ಪಲ್ಟಿ

ಶಂಕರಾಚಾರ್ಯರ ಸ್ತೋತ್ರ ಗಾಯನ ಸಂದರ್ಭದಲ್ಲೂ ಭಾವಕ್ಕೆ ಅನುಗುಣವಾಗಿ ಚಿತ್ರ ರಚಿಸಿ ಯಶಸ್ವಿಯಾದ ಗರಿಮೆ ಇವರದ್ದಾಗಿದೆ.ಇವರ ವ್ಯಂಗ್ಯ ಚಿತ್ರಗಳು ನಾಡಿನ ಹಲವು ಪತ್ರಿಕೆಗಳಲ್ಲಿ ನಿಯತವಾಗಿ ಪ್ರಕಟವಾಗುತ್ತಿದ್ದುದು ಅವರ ಸಮಕಾಲೀನ ಆಗುಹೋಗುಗಳ ಬಗೆಗಿರುವ ಸ್ಪಂದನೆಗೆ ಇರುವ ಸಾಕ್ಷಿಗಳಾಗಿವೆ.

ಇಂದೂ ದಿನವೊಂದಕ್ಕೆ ಹಲವು ಶೈಲಿಗಳ ಚಿತ್ರಗಳನ್ನು ರಚಿಸುತ್ತಾ ಪ್ರಕಟಿಸುತ್ತಾ ಇರುವ ಅವರ ಕಲಾಸೇವೆ ಸ್ತುತ್ಯರ್ಹ. ಅವರ ಸರ್ವತೋಮುಖ ಕಲಾಸೇವೆಯನ್ನು ಗುರುತಿಸಿ ಈ ವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆಯೆಂದು “ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆ”ಯ ಸಂಚಾಲಕ ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಇದೇ ತಿಂಗಳ 9 ರಂದು ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ನಲ್ಲಿ ಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪ್ರಶಸ್ತಿ ಪ್ರದಾನ ಮಾಡಲಿರುವರು.

RELATED ARTICLES  ಡಿವೈಡರ್ ಮೇಲೆ ಹತ್ತಿದ ಗ್ಯಾಸ್ ಟ್ಯಾಂಕರ್ : ಅಪಘಾತದಿಂದ ಕೆಲ ಸಮಯ ಭಯದ ವಾತಾವರಣ.