ಕುಮಟಾ : ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳಿಗಿಂತಲೂ ಸರ್ವ ಶ್ರೇಷ್ಠವಾದುದಾಗಿದ್ದು, ಶಿಕ್ಷಕರು ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸುವ ಮೂಲಕ ಸಮಾಜದ ಸತ್ಪ್ರಜೆಗಳನ್ನು ರೂಪಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಹಶೀಲ್ದಾರ್ ಸತೀಶ ಗೌಡ ಹೇಳಿದರು.

ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಕುಮಟಾ ಶಾಖೆ ಇವರ ಆಶ್ರಯದಲ್ಲಿ ಪಟ್ಟಣದ ಗಿಬ್ ಪ್ರೌಢಶಾಲೆಯ ರಾಜೇಂದ್ರ ಪ್ರಸಾದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಶಿಕ್ಷಕರ ದಿನಾಚರಣೆ ಹಾಗೂ ಗುರುಗೌರವ ಕಾರ್ಯಕ್ರಮ ಉದ್ಘಾಟಿಸಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

RELATED ARTICLES  ಭೀಕರ ಅಪಘಾತ : ಬ್ಯಾಂಕ್ ನೌಕರನೋರ್ವ ಸ್ಥಳದಲ್ಲಿಯೇ ಸಾವು.

ಏನನ್ನೂ ಅರಿಯದ ಎಳೆಯ ಮನಸ್ಸಿನಲ್ಲಿ ಜ್ಞಾನದ ಬೀಜ ಬಿತ್ತಿ ಅದಕ್ಕೆ ಬೇಕಾದ ನೀರೆರೆದು ಪೋಷಿಸಿ, ಜ್ಞಾನದ ಮಂಟಪ ಕಟ್ಟುವ ಕಾಯಕಯೋಗಿಗಳು ಶಿಕ್ಷಕರು. ಪ್ರಜ್ಞಾವಂತ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಗುರುತರವಾಗಿದೆ. ಅಕ್ಷರ ಜ್ಞಾನ ನೀಡಿ, ಬದುಕು ರೂಪಿಸುವ ಸಂಸ್ಕಾರವನ್ನೂ ನೀಡುವ ಶಿಕ್ಷಕರ ಕಾಯಕ ಅನನ್ಯವಾದದ್ದು. ಮುಂದಿನ ಸಮಾಜ ಇಂದಿನ ಶಿಕ್ಷಕರನ್ನು ಅವಲಂಭಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿಯಲ್ಲಿ ವನ್ಯಜೀವಿ ಸಪ್ತಾಹ ಮತ್ತು ಬೆಂಕಿಯಿಂದ ಅರಣ್ಯ ರಕ್ಷಣೆ ಜಾಗೃತಿ ಕಾರ್ಯಕ್ರಮ.

ಕಾರ್ಯಕ್ರಮದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಬಿ.ಮುಲ್ಲಾ, ನಾಗರಾಜ ನಾಯ್ಕ, ನಿವೃತ್ತ ಶಿಕ್ಷಕರುಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಶಿಕ್ಷಕರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸ್ಟೇಟ್ ಬ್ಯಾಂಕ್‍ನ ಮ್ಯಾನೇಜರ್ ಮಂದೀಪ್, ರೇಖಾ ನಾಯ್ಕ, ಎಸ್.ಬಿ ನಾಯಕ, ವಿನಾಯಕ ಹೆಗಡೆ, ರವೀಂದ್ರ ಭಟ್ಟ ಸೂರಿ, ಬಿ.ಜಿ.ನಾಯಕ, ಬೀರದಾಸ ಗುನಗ, ಅನೀಲ ರೊಡ್ರಿಗೀಸ್, ಲಕ್ಷ್ಮೀ ಶೆಟ್ಟಿ ಇತರರು ಉಪಸ್ಥಿತರಿದ್ದರು. ಆರ್.ಎಲ್ ಭಟ್ಟ ಸರ್ವರನ್ನೂ ಸ್ವಾಗತಿಸಿದರು.