ಕಾರವಾರ: ನಗರದ ಖಾಪ್ರಿ ದೇವಸ್ಥಾನದ ಹತ್ತಿರ ಗೋವಾದಿಂದ ಟಾಟಾ ಏಸ್ ವಾಹನದಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಸುಮಾರು 1.18 ಲಕ್ಷ ರೂ ಮೌಲ್ಯದ ಗೋವಾ ಮದ್ಯವನ್ನು ಮತ್ತು ಇಬ್ಬರು ಆರೋಪಿಗಳನ್ನು ಕಾರವಾರ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಓರ್ವ ಆರೋಪಿ ಪರಾರಿಯಾಗಿದ್ದಾನೆ.

RELATED ARTICLES  ಭಟ್ಕಳ: ಗ್ರಾ.ಪಂ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಕಂಪ್ಯೂಟರ್ ಆಪರೇಟರ್ ಗಳ ನೇಮಕಾತಿಗಾಗಿ ಮನವಿ

ಕಾರವಾರ ಮೂಲದ ಸಂತೋಷ ಅಶೋಕ ಕೋಠಾರಕರ ಹಾಗೂ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಮೂಲದ ಪ್ರಸಾದ ರಾಮಾ ದೇಸಾಯಿ ಮದ್ಯ ಸಾಗಿಸುತ್ತಿದ್ದ ಆರೋಪಿಗಳು. ಇವರು ಮದ್ಯವನ್ನು ಸಾಗಿಸುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸಾಗಾಟದಲ್ಲಿ
ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಅಂಕೋಲಾದ ಅವರ್ಸಾ ಮೂಲದ ಮಿಥುನ ನಾರಾಯಣ ನಾಯ್ಕ ಪರಾರಿಯಾಗಿದ್ದಾನೆ.

RELATED ARTICLES  ಹೊನ್ನಾವರ : ಬೋನಿಗೆ ಬಿದ್ದ ಕರಿಚಿರತೆ

ಈ ದಾಳಿಯಲ್ಲಿ ಅಂದಾಜು 750 ಎಂ.ಎಲ್‌ನ 504 ಗೋವಾ ಫೆನ್ನಿ ಬಾಟಲಿಗಳು, 288 ವಿಸ್ಕಿ ಬಾಟಲಿಗಳು ಹಾಗೂ ಸಾಗಾಟಕ್ಕೆ ಬಳಸಲಾಗಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.