ಮುಂಡಗೋಡ : ಮುಂಡಗೋಡ ಟಿಬೆಟಿಯನ್ ಕ್ಯಾಂಪ್ ನಂ. 4 ರಲ್ಲಿ ವ್ಯಕ್ತಿಯನ್ನು ಗಂಭೀರವಾಗಿ ಚಾಕುವಿನಿಂದ ಇರಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಟಿಬೆಟಿಯನ್ ವ್ಯಕ್ತಿ ಜಮಯಾಂಗ್ ಡಾಕ್ಸಾ ಯಾನೆ ಲೋಬ್ಬಾಂಗ್ (35) ಎಂಬಾತನು ಮೃತಪಟ್ಟಿದ್ದಾನೆ. ಈತ ತಡರಾತ್ರಿ ಜಗಳ ನಡೆದು ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗೊನಪೊ ತಿನ್ನೆ ಚೊಡೆಕ್ (50) ಕೊಲೆ ಮಾಡಿರುವ ಆರೋಪಿಯಾಗಿದ್ದು, ಇತನು ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು
ತಿಳಿಸಿದ್ದಾರೆ. ಹತ್ಯೆ ಮಾಡಿರುವ ಆರೋಪಿ ಮಾಜಿ ಸೈನಿಕನಾಗಿದ್ದಾನೆ. ಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಕನ್ನಡ
ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.