ಹೊನ್ನಾವರ: ತಾಲೂಕಿನ ಮಂಕಿ ಠಾಣೆಯ ಪೊಲೀಸರ ತಂಡವು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ ಹೆಡೆಮುರಿ ಕಟ್ಟಿ 15 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರಾದ ಹುಬ್ಬಳ್ಳಿಯ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ, ಧಾರವಾಡ ಜಿಲ್ಲೆಯ ಕುಂದಗೋಳದ ರವಿಚಂದ್ರ ಶಿವಪ್ಪ ತಳವಾರ ಎಂದು ತಿಳಿದು ಬಂದಿದೆ.
ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಆರೋಪಿತರು ಮೋಟಾರ್ ವಾಹನವನ್ನು ನಿಲ್ಲಿಸದೇ, ಸಂಶಯಾಸ್ಪದವಾಗಿ ಚಲಾಯಿಸಿಕೊಂಡು ಬಂದಿದ್ದರು. ಪೊಲೀಸರು ಈ ವೇಳೆಯಲ್ಲಿ ಆರೋಪಿತರನ್ನು ಅಡ್ಡಗಟ್ಟಿ ವಿಚಾರಿಸಿದಾಗ ಸರ್ಮಪಕವಾದ ಉತ್ತರ ನೀಡಿಲ್ಲ.
ಆದಕಾರಣ ವಿಚಾರಣೆಗೆ ಒಳಪಡಿಸಿದಾಗ ಮೋಟಾರ್ ವಾಹನವನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ಬಂದಿರುವುದು ತನಿಖೆಯಿಂದ ತಿಳಿದು ಬಂದಿದೆ.
ಮಂಕಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಭರತಕುಮಾರ ವಿ. ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಆರೋಪಿತರು ಉಡುಪಿ ಕಡೆಯಿಂದ ಕಪ್ಪು ಬಣ್ಣದ ಟಿವಿಎಸ್ ರೈಡರ್ ಮೋಟಾರ್ ವಾಹನವನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ
ಒಪ್ಪಿಕೊಂಡಿದ್ದಾರೆ.