ನಮ್ಮೆಲ್ಲರನ್ನು ಅಗಲಿರುವ ಬಿಜೆಪಿ ಮುಖಂಡ ಹಾಗೂ ಜಿ. ಪಂ. ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಶೃದ್ಧಾಂಜಲಿ ಸಭೆಯನ್ನು ಹೊನ್ನಾವರ ತಾಲೂಕಿನ ಮುಗ್ವಾ ಸಂಸ್ಕೃತ ಪಾಠಶಾಲೆಯ ರಾಘವೇಶ್ವರ ಭಾರತೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಸಕ ದಿನಕರ ಶೆಟ್ಟಿ ಹಾಗೂ ಭಾಗವಹಿಸಿದ ಎಲ್ಲರೂ ಸುಬ್ರಹ್ಮಣ್ಯ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ನುಡಿ ನಮನ ಸಲ್ಲಿಸಿದ ಶಾಸಕರು ಸುಬ್ರಹ್ಮಣ್ಯ ಶಾಸ್ತ್ರೀಯವರ ವ್ಯಕ್ತಿತ್ವ ಹಾಗೂ ಅವರ ಸಮಾಜ ಸೇವೆಯ ಕುರಿತಾಗಿ ಸ್ಮರಿಸಿದ್ದರು.
ಹೊನ್ನಾವರ ಮಂಡಲ ಬಿಜೆಪಿ ಅಧ್ಯಕ್ಷ ರಾಜು ಭಂಡಾರಿ, ನಿವೃತ್ತ ಪ್ರಾಂಶುಪಾಲಾರದ ವಿ. ಜಿ. ಹೆಗಡೆ, ಎಮ್. ಎಸ್. ಹೆಗಡೆ ಕಣ್ಣಿ, ಹೊಸಾಕುಳಿ ಗ್ರಾ. ಪಂ. ಅಧ್ಯಕ್ಷ ಸುರೇಶ ಶೆಟ್ಟಿ, ಪಂಚಾಯತ್ ಸದಸ್ಯರಾದ ಗೋವಿಂದ ಗೌಡ ಹಾಗೂ ಬಾಲಚಂದ್ರ ನಾಯ್ಕ ಸೇರಿದಂತೆ ಸುಬ್ರಹ್ಮಣ್ಯ ಶಾಸ್ತ್ರಿಯವರ ಅಭಿಮಾನಿಗಳು ಉಪಸ್ಥಿತರಿದ್ದರು.