ಕುಮಟಾ : ವಿದ್ಯಾರ್ಥಿಗಳು ಸಾಧನೆ ಮಾಡಲು ಮುನ್ನುಗ್ಗಬೇಕು. ತನಗೆ ಸೌಕರ್ಯಗಳಿಲ್ಲ ಎಂದು ಋಣಾತ್ಮಕವಾಗಿ ವಿಚಾರಮಾಡಬಾರದು. ಏನೇ ಕಷ್ಟ ಬಂದರು ಧೃರ್ಯದಿಂದ
ಎದುರಿಸಬೇಕು ಮತ್ತು ಗುರಿಯನ್ನು ಸಾಧಿಸಬೇಕೆಂದು ಅಂತಾರಾಷ್ಟ್ರೀಯ ಪವರ್ ಲಿಪ್ಟರ್ ವೆಂಕಟೇಶ ಪ್ರಭು ಹೇಳಿದರು. ಅವರು ಇಲ್ಲಿನ ಸರಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿಯಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಫಿಟ್ ಇಂಡಿಯಾ ಮತ್ತು ರಾಷ್ಠ್ರೀಯ ಕ್ರೀಡಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ವೈಯಕ್ತಿಕ ಸಾಧನೆಯನ್ನು ವಿವರಿಸಿದ ಅವರು ಕುಮಟಾದಂತಹ ಸ್ಥಳದಲ್ಲಿ ಕ್ರೀಡೆಗೆ ಅಷ್ಟೇನು ಪ್ರೂತ್ಸಾಹವಿಲ್ಲದ ಸಂದರ್ಭದಲ್ಲಿ ತಾವು ಪವರ್ ಲಿಪ್ಟಿಂಗ್ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿ ಅಂತರಾಷ್ಟ್ರೀಯ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ವೈಯಕ್ತಿಕ ಸಾಲಮಾಡಿ ಸಾಧನೆ ಮಾಡಿದ್ದೇನೆ. ಆದರೆ ಈಗ ನನನ್ನು ಎಲ್ಲರೂ ಗೌರವಿಸುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯ ಅರ್.ಎಚ್.ನಾಯ್ಕ ವಹಿಸಿ ವಿದ್ಯಾರ್ಥಿಗಳಿಗೆ ಇಂದು ವೆಂಕಟೇಶ ಪ್ರಭುರವರು ಮಾದರಿಯಾಗಿದ್ದಾರೆ ಎಂದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಉಪನ್ಯಾಸಕ ರಾಘವೇಂದ್ರ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪರವಾಗಿ ವೆಂಕಟೇಶ ಪ್ರಭುರವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಆನಂದ ವೈ. ನಾಯ್ಕ, ನಾಗರಾಜ ಬಿ. ಉಪಸ್ಥಿತರಿದ್ದರು. ತನುಜಾ ಪಟಗಾರ ನಿರೂಪಿಸಿದರು. ವಾಸಂತಿ ಗೌಡ ಸ್ವಾಗತಿಸಿದರು. ಸಹನಾ ತಕ್ಕರ್ ಅಭಿನಂದಿಸಿದರು.