ಕುಮಟಾ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಮಟಾ ಬಸ್ ನಿಲ್ದಾಣಕ್ಕೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಭೇಟಿನೀಡಿ, ಪ್ರಯಾಣಿಕರು ಹಾಗೂ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರು ಬಸ್ ನಿಲ್ದಾಣದ ಶೌಚಾಲಯ ಹಾಗೂ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ಘಟಕ ವ್ಯವಸ್ಥಾಪಕ ವೈ. ವಿ. ಬಾನಾವಳಿಕರ ಅವರಿಗೆ ಸೂಚಿಸಿದರು. ಶೌಚಾಲಯದ ಬಗ್ಗೆ, ನೀರಿನ ವ್ಯವಸ್ಥೆ ಬಗ್ಗೆ ಹಾಗೂ ಇನ್ನಿತರ ವ್ಯವಸ್ಥೆ ಬಗ್ಗೆ ದೂರದೂರುಗಳಿಂದ ಬಂದ ಮಹಿಳೆಯರು ಹಾಗೂ ಹಲವು ಪ್ರಯಾಣಿಕರೊಂದಿಗೆ ಚರ್ಚೆ ನಡೆಸಿದ ಶಾಸಕರು, ಅವರಿಂದ ಹಿಮ್ಮಾಹಿತಿ ಪಡೆದುಕೊಂಡರು.

RELATED ARTICLES  ಮಾರಿಕಾಂಬಾ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ : ಮುಂಗಡ ಟಿಕೆಟ್ ಕಾಯ್ದಿರಿಸಲು ವ್ಯವಸ್ಥೆ

ಇಲ್ಲಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ, ಇಲಾಖೆಯ ಅಧಿಕಾರಿಗಳಿಗೂ ಫೋನ್ ಮೂಲಕ ಅವರ ಸೂಚನೆ ನೀಡಿದರು. ಅಲ್ಲಲ್ಲಿ ಇಡಲಾದ ಕಸದ ತೊಟ್ಟಿಗಳ ಸ್ವಚ್ಛತೆ ಹಾಗೂ ಅವುಗಳನ್ನು ಆಗಾಗ ಸ್ವಚ್ಛಪಡಿಸುವುದರ ಬಗ್ಗೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

RELATED ARTICLES  ಮಾ. ೩ ರಿಂದ ಕುಮಟಾದಲ್ಲಿ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್‌

ಸಾಮಾಜಿಕ ಕಾರ್ಯಕರ್ತ ವಿ. ಐ. ಹೆಗಡೆ, ಗಣೇಶ ಪಂಡಿತ್, ಕೇಶವ ನಾಯ್ಕ, ಶಶಾಂಕ ಶಾಸ್ತ್ರೀ, ಗೋಪಾಲಕೃಷ್ಣ ಶೆಟ್ಟಿ ಮತ್ತಿತರರು ಜೊತೆಗಿದ್ದರು.