ಹೊನ್ನಾವರ: ತಾಲೂಕಿನ ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿ ಯ ಡಾ .ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸೆಲೆನ್ಸ್ & ರಿಸರ್ಚ್ ಹಾಗೂ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಕೇಂದ್ರಿಯ ವಿದ್ಯಾಲಯದ ಸಭಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 9 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ,ಜೆಇಇ, ನೀಟ್ ಕುರಿತಾಗಿ ಅರಿವು ಮೂಡಿಸಿ , ವಿದ್ಯಾರ್ಥಿಗಳಿಗೆ ಫೌಂಡೇಶನ್ ನೀಡುವ ತರಗತಿ ಇದಾಗಿದೆ.
ಕೇಂದ್ರಿಯ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಫೌಂಡೇಶನ್ ತರಗತಿಯ ಉದ್ಘಾಟನಾ ಸಮಾರಂಭಕ್ಕೆ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಾಗಿದ್ದರು. ಇನ್ನು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಪಿ.ಇ.ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಎಸ್.ಡಿ.ಎಂ ಕಾಲೇಜು ನೀಡುತ್ತಿರುವ ಶಿಕ್ಷಣದ ಸೌಲಭ್ಯಗಳು ಹಾಗೂ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದರ ಬಗ್ಗೆ ಮತ್ತು ಡಾ. ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ನಲ್ಲಿ ವಿವಿಧ ಪ್ರಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನಡೆಯಲಿದೆ. ಅಲ್ಲದೆ ಉತ್ತಮ ಫಲಿತಾಂಶಗಳನ್ನು ನೀಡಿದ ಹೆಮ್ಮೆ ನಮಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಎಸ್.ಡಿ.ಎಂ ಕಾಲೇಜಿನ ಪೂರ್ವ ವಿದ್ಯಾರ್ಥಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ . ಚೇತನ್ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ತಾವು ಯಾವ ಕ್ಷೇತ್ರದಲ್ಲಿ ಗುರ್ತಿಸಿಕೊಳ್ಳಬೇಕು ಎಂಬುದನ್ನು ಪಕ್ಕಾ ಮಾಡಿಕೊಳ್ಳಬೇಕು ಅಲ್ಲದೆ ವಿದ್ಯಾರ್ಥಿಗಳು ಪ್ರಯತ್ನವನ್ನು ನಿರಂತರವಾಗಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದರು.
ಇನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಆಸ್ಪತ್ರೆ ವೈದ್ಯ ಡಾ.ರಮೇಶ್ ಗೌಡ ಮಾತನಾಡಿ ಅವಕಾಶಗಳು ಸಿಕ್ಕಾಗ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇರೆ ಜಿಲ್ಲೆಗಳಿಗೆ ತೆರಳಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇಲ್ಲ ಯಾಕೆಂದರೆ ಎಸ್.ಡಿ.ಎಂ ಕಾಲೇಜು ಆಡಳಿತ ಮಂಡಳಿ ನಿಮಗೆ ಉಪಯೋಗವಾಗುವ ಸೌಲಭ್ಯವನ್ನು ಒದಗಿಸಿದೆ ಎಂದರು.
ಯಾಕೆಂದರೆ ಎಸ್.ಡಿ.ಎಂ ಕಾಲೇಜು ಆಡಳಿತ ಮಂಡಳಿ ನಿಮಗೆ ಉಪಯೋಗವಾಗುವ ಸೌಲಭ್ಯವನ್ನು ಹಾಗೂ ವಿವಿಧ ಕೋರ್ಸ್ ಗಳನ್ನು ಆರಂಭಿಸಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಫೌಂಡೇಶನ್ ತರಗತಿಯನ್ನು ನುರಿತ ಉಪನ್ಯಾಸಕರು ನಡೆಸಿಕೊಡಲಿದ್ದಾರೆ.ಅಲ್ಲದೆ ಸ್ಮಾರ್ಟ್ ಡಿಜಿಟಲ್ ಬೋರ್ಡ್ ಗಳ ಮುಖಾಂತರ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡಲಿದ್ದಾರೆ. ಇದೇ ವೇಳೆ ಉಪನ್ಯಾಸಕರು ಫೌಂಡೇಶನ್ ಕೋರ್ಸ್ ಮಹತ್ವವನ್ನು ವಿವರಿಸಿದರು.
ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ಡೈರೆಕ್ಟರ್ ಡಾ.ಶಿವರಾಮ್ ಶಾಸ್ತ್ರಿ ಸ್ವಾಗತಿಸಿದರು. ಸಿಇಓ ಕಿರಣ್ ಕುಡ್ತಾರ್ ಕರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕುಮಾರಿ ಅನ್ವಿತಾ ನಾಯ್ಕ ಹಾಗೂ ಶ್ರೀ ಲಕ್ಷ್ಮೀ ನಾಯ್ಕ ಪ್ರಾರ್ಥಿಸಿದರು.ಕೋ ಆರ್ಡಿನೇಟರ್ ಪ್ರಸಾದ್ ಹೆಗಡೆ ಸರ್ವರನ್ನು ವಂದಿಸಿದರು.