ಅಂಕೋಲಾ : ಪಟ್ಟಣದ ಅಂಬಾರಕೊಡ್ಲ ರಸ್ತೆಯಲ್ಲಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿರುವ ರೊಯ್ ಪ್ಯಾಶನ್ ಬಟ್ಟೆ ಅಂಗಡಿಗೆ ಮತ್ತು ಪಕ್ಕದಲ್ಲಿದ್ದ ಮಹಾಸತಿ ಮೊಬೈಲ್ ಅಂಗಡಿಗಳಿಗೆ ಬೆಂಕಿ ತಗುಲಿದೆ.
ಇದರಲ್ಲಿ ಬಟ್ಟೆ ಅಂಗಡಿ ಸಂಪೂರ್ಣವಾಗಿ ಸುಟ್ಟು
ಕರಕಲಾಗಿದೆ. ಮೊಬೈಲ್ ಅಂಗಡಿಗೂ ಬೆಂಕಿ ತಗುಲಿದೆ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಮೊಬೈಲ್ ಅಂಗಡಿಯಲ್ಲಿ ಸಂಪೂರ್ಣ ನೀರು ಸಿಡಿದು ಎಲ್ಲಾ ಸಾಮಾನು ನೀರಿಗೆ ಹಾನಿಯಾಗಿದೆ. ಗಣೇಶ ಚತುರ್ಥಿ ಹಬ್ಬಕ್ಕೆ ಲಕ್ಷಾಂತರ ಮೌಲ್ಯದ ಬಟ್ಟೆಗಳನ್ನು ತರಿಸಿದ್ದರು ಎನ್ನಲಾಗಿದೆ.ಸುಮಾರು 12 ರಿಂದ 15 ಲಕ್ಷ ರೂಪಾಯಿ ಮೌಲ್ಯದ ಬಟ್ಟೆ ಹಾನಿಯಾಗಿದೆ ಎಂದು ತಿಳಿದಿದೆ.
ತಕ್ಷಣ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದವರು
ಬೆಂಕಿ ನಂದಿಸಿದ್ದರಿಂದ ಈ ಮಳಿಗೆಯ ಅಕ್ಕ ಪಕ್ಕದಲ್ಲಿ ಇರುವ ಅಂಗಡಿಗೆ ಬೆಂಕಿ ಹರಡಿ ಆಗಬಹುದಾದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಅಂಕೋಲಾ ಪಿಎಸ್‌ಐ ಉದ್ದಪ್ಪ ಧರೇಪ್ಪನವರ ಮತ್ತು ಸಿಬ್ಬಂದಿಗಳು ಹಾಜರಿದ್ದು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಅಂಕೋಲಾ ಪಿ ಎಸ್ ಐ ಉದ್ದಪ್ಪ ಧರೇಪ್ಪನವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.