ಶಿರಸಿ: ಮಳೆ ಬಾರದೇ ನೀರಿನ ಕೊರತೆಯಿಂದ ಮೆಕ್ಕೆಜೋಳ ಹಾಗೂ ಅಡಿಕೆ ಬೆಳೆ ನಾಶವಾಗಿದ್ದರಿಂದ, ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲು ಹೆದರಿ ರೈತನೊಬ್ಬ ನೇಣು
ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ಬುತ್ತಿ ಗ್ರಾಮದಲ್ಲಿ ನಡೆದಿದೆ. ಅಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬುತ್ತಿ ಗ್ರಾಮದ ಜಗದೀಶ ಚೆನ್ನಪ್ಪ ಚನ್ನಯ್ಯ (64) ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ.

RELATED ARTICLES  ಅಭೂತಪೂರ್ವ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ‌ ಪ್ರದೀಪ ನಾಯಕ ದೇವರಬಾವಿ.

ಇವರು ಅಂಡಗಿ ಪ್ರಾಥಮಿಕ ಪತ್ತಿನ ಸಹಕಾರಿ
ಸಂಘದಲ್ಲಿ 3 ಲಕ್ಷ ಸಾಲ ಮಾಡಿ ಕೃಷಿ ಮಾಡಿದ್ದು, ಈ ಹಣದಲ್ಲಿ ಕೊಳವೆಬಾವಿ ಕೊರೆಸಿದ್ದು, ಮಳೆ ಕೊರತೆಯ ಕಾರಣ ನೀರು ಸ್ಥಗಿತವಾಗಿತ್ತು. ಇದರಿಂದ ಎರಡುವರೆ ಎಕರೆ ಜಾಗದಲ್ಲಿ ಬೆಳೆದ ಅಡಿಕೆ, ಮೆಕ್ಕೆಜೋಳ ಒಣಗಿ ಹೋಗಿತ್ತು.
ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬನವಾಸಿ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದೆ.

RELATED ARTICLES  ಶ್ರೀ ಷ ಬ್ರ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಗೆ ಸಂದ ಗೋಕರ್ಣ ಗೌರವ.