ಕುಮಟಾ : ತಮ್ಮ ಸರಳತೆಯ ಮೂಲಕವೇ ಹೆಸರಾಗಿರುವ ಶಾಸಕ ದಿನಕರ ಶೆಟ್ಟಿ, ಬಡವರಿಗೆ ಹಾಗೂ ಕಷ್ಟದಲ್ಲಿರುವವರಿಗೆ ನೆರವಾಗುವುದರ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿದ್ದಾರೆ.
ಅನ್ಯ ಕಾರ್ಯಕ್ರಮದ ನಿಮಿತ್ತ ಗುರುವಾರ ಕುಮಟಾದ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಶಾಸಕ ದಿನಕರ ಶೆಟ್ಟಿ, ಹೂ ಮಾರುವ ಮಹಿಳೆಯರು ಸುಡು ಬಿಸಿಲಿನಲ್ಲಿ ಅತಿತ್ತ ಓಡಾಡುತ್ತಾ, ಪ್ರಯಾಣಿಕರಿಗೆ ಹೂಗಳನ್ನು ಮಾರುತ್ತಿರುವುದನ್ನು ಕಂಡು ಅವರನ್ನು ಕರೆದು, ತಮ್ಮ ಕೈಯಿಂದ ಹಣಕೊಟ್ಟು ಹೂಗಳನ್ನು ಖರೀದಿಸಿ ಸರಳತೆಯ ಮೂಲಕ ಸುತ್ತಲಿನವರ ಮನ ಮನೆಗೆದ್ದಿದ್ದಾರೆ.