ಕುಮಟಾ : ಉತ್ತರಕನ್ನಡ ಜಿಲ್ಲಾ ದೇಶಭಂಡಾರಿ ಸಮಾಜೋನ್ನತಿ ಸಂಘದ ಕುಮಟಾ ಶಾಖೆಯ ವತಿಯಿಂದ ಪ್ರತಿವರ್ಷವೂ ಜರುಗುತ್ತಾ ಬಂದಿರುವ ಸಾಮೂಹಿಕ ಸತ್ಯನಾರಾಯಣ ಕಥಾ ಪೂಜನ, ಭಜನ, ಗಾಯನ ಕಾರ್ಯಕ್ರಮ ತಾಲೂಕಿನ ಶಾಂತಿಕಾಂಬಾ ಸಭಾಭವನದಲ್ಲಿ ರವಿವಾರ ಸಂಪನ್ನವಾಯಿತು.
ಜಿಲ್ಲಾ ಸಂಘದ ಉಪಾಧ್ಯಕ್ಷ ಕಾಗಾಲ ಚಿದಾನಂದ ಭಂಡಾರಿ, ಹರ್ಷಿತಾ ದಂಪತಿಗಳ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮ ಜರುಗಿತು. ಕುಂಬೇಶ್ವರದ ದತ್ತಾತ್ರೇಯ ಭಟ್ಟ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಾಜ ಬಾಂಧವರ ವತಿಯಿಂದ ಭಜನ, ಗಾಯನ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ಅರಿಶಿನ ಕುಂಕುಮ ಕಾರ್ಯಕ್ರಮ ಜರುಗಿತು. ಪ್ರತೀ ವರ್ಷಕ್ಕಿಂತಲೂ ಹೆಚ್ಚಿನವರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದು ವಿಶೇಷ ಎನಿಸಿತ್ತು.
ಸಮಾಜದ ಅಧ್ಯಕ್ಷ ಶ್ರೀಧರ ಬೀರಕೋಡಿ, ಕಾರ್ಯದರ್ಶಿ ಅರುಣ ಮಣಕೀಕರ್, ಪ್ರಭಾಕರ್ ಮಣಕೀಕರ್, ಮಹೇಶ ದೇಶಭಂಡಾರಿ, ಮಹಿಳಾ ಸಂಘದ ಅಧ್ಯಕ್ಷೆ ಸುಷ್ಮಾ ಗಾಂವಕರ್, ಮೀರಾ ಮಣಕೀಕರ್, ಗಾಯತ್ರಿ ದೀವಗಿ, ಅಂಕಿತಾ ಗಾಂವ್ಕರ್, ಜಯಂತ ಭಂಡಾರಿ, ರಮೇಶ ಭಂಡಾರಿ, ವಿಜಯ ಬೀರಕೋಡಿ, ಕೇಶವ ದೀವಗಿ, ಅಶೋಕ ಭಂಡಾರಿ, ಸುರೇಶ ಗಾಂವಕ್ಕರ ಮೊದಲಾದವರು ಉಪಸ್ಥಿತರಿದ್ದರು.