ಅಂಕೋಲಾ : ತಾಲ್ಲೂಕಿನ ಅಂಕೋಲಾದ ಅಲಗೇರಿಯ ಶ್ರೀ ಮಹಾದೇವ ದೇವಸ್ಥಾನದಲ್ಲಿ ಕೊನೆಯ ಶ್ರಾವಣ ಸೋಮವಾರದಂದು ವರ್ಷoಪ್ರತಿಯಂತೆ ವಿಶೇಷ ತಾಳಮದ್ದಲೆಯ ಕಾರ್ಯಕ್ರಮವು ನಡೆಯಿತು. ಸ್ಥಳೀಯ ಯಕ್ಷಮುಖಿ ತಂಡದಿಂದ ಪ್ರದರ್ಶನಗೊಂಡ ಕರ್ಣಾರ್ಜುನ ಪ್ರಸಂಗದಲ್ಲಿ ಕರ್ಣನಾಗಿ ಖ್ಯಾತ ನಿರೂಪಕ ರಾಜೇಶ ನಾಯಕ ಸೂರ್ವೆ ಭಾವನಾತ್ಮಕವಾಗಿ ಪಾತ್ರಕ್ಕೆ ಜೀವ ತುಂಬಿದರೆ, ಅಬ್ಬರದ ಅರ್ಜುನನಾಗಿ ಅಧ್ಯಾಪಕ ಮಂಜುನಾಥ ಗಾoವಕರ ಬರ್ಗಿಯವರು ಕಳೆಗಟ್ಟಿದರು.

RELATED ARTICLES  ಶಿರಸಿ ಜಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಬರಬೇಕಂತೆ! ಪತ್ರ ಬರೆದು ತಿಳಿಸಿದ್ದಾಳೆ ಅಮೃತಾ

ಕೃಷ್ಣನ ಪಾತ್ರದಲ್ಲಿ ನಾಡಿನ ಹೆಸರಾಂತ ನ್ಯಾಯವಾದಿ ನಾಗರಾಜ ನಾಯಕ ಬಾಸಗೋಡರವರ ಸಮಕ್ಷಮದಲ್ಲಿ ಶಲ್ಯನಾಗಿ ಸ್ಥಳೀಯ ಹಿರಿಯ ಕಲಾವಿದ ಲಕ್ಷ್ಮಣ ನಾಯಕರವರು ಸಮರ್ಥವಾಗಿ ಪಾತ್ರವನ್ನು ನಿರ್ವಹಿಸಿದರು. ಅಶ್ವಸೇನನಾಗಿ ಸುಜನ್ ನಾಯಕ ಹಾಗೂ ಕೃಷ್ಣ ಬ್ರಾಹ್ಮಣನಾಗಿ ಪನ್ನಗ ಸಂದೀಪರೆಂಬ ಉದಯೋನ್ಮುಖ ಪ್ರತಿಭೆಗಳು ಗಮನ ಸೆಳೆದರು.

RELATED ARTICLES  ರೌಡಿ ಶೀಟರ್ ಹಾಗೂ ಕಾಗೇರಿ ಮಾತುಕಥೆಯ ಫೋಟೋ ವೈರಲ್.

ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಾಪಕ ಮಂಜುನಾಥ ಗಾoವಕರ ಬರ್ಗಿಯವರು, ಹಿರಿ-ಕಿರಿಯ ಕಲಾವಿದರನ್ನೊಳಗೊಂಡ ಯಕ್ಷಮುಖಿಯು ಯಕ್ಷಗಾನಕ್ಕೆ ಸಂಬಂಧಿಸಿ ತನ್ನ ಮಿತಿಯಲ್ಲಿ ಕಳೆದೊಂದು ವರ್ಷಗಳಿಂದ ನಿರಂತರವಾಗಿ ಕಾರ್ಯಪ್ರವ್ರತ್ತವಾಗಿದ್ದು, ಅಲಗೇರಿಯಂತಹ ಗ್ರಾಮೀಣ ಪ್ರದೇಶದಲ್ಲಿ ತಾಳಮದ್ದಲೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಆಶಾದಾಯಕವಾದ ಬೆಳವಣಿಗೆ ಎಂದರು.