ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ 2022-23 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿ ಕು. ಸಾತ್ವಿಕ ಭಟ್ ಇವನು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (IISER), ತಿರುವನಂತಪುರಂ ನಲ್ಲಿ ಐದು ವರ್ಷದ ಬಿ.ಎಸ್. ಎಮ್ ಎಸ್. ಸಂಯುಕ್ತ ಕೋರ್ಸ್ ಗೆ ಆಯ್ಕೆಯಾಗಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾನೆ.
ಭಾರತದಾದ್ಯಂತ ಒಟ್ಟು ಏಳು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಮಾತ್ರ ಇದ್ದು, ಇಲ್ಲಿ ಐದು ವರ್ಷಗಳ ಬಿ. ಎಸ್. ಎಮ್. ಎಸ್. ಸಂಯುಕ್ತ ಕೋರ್ಸ್ ಹಾಗೂ ಮೂರು ವರ್ಷಗಳ ಬಿ.ಎಸ್. ಕೋರ್ಸಗಳಿದ್ದು, ಇದಕ್ಕೆ ಜೆಇಇ ಅಡ್ವಾನ್ಸ್ ಹಾಗೂ ಐ.ಐ.ಎಸ್.ಇ.ಆರ್. ಆ್ಯಪ್ಟಿಟ್ಯೂಡ್ ಪರೀಕ್ಷೆ ಯ(IAT) ಮುಖಾಂತರ ಪ್ರವೇಶಾತಿ ಇರುತ್ತದೆ. ಪ್ರತಿ ವರ್ಷ ಸುಮಾರು ೩-೪ ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ, ಅದರಲ್ಲಿ ಸರಿಸುಮಾರು ಒಂದು ಸಾವಿರದ ಎಂಟು ನೂರು ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಇಂತಹ ಪ್ರತಿಷ್ಠಿತ ಸಂಸ್ಥೆಗೆ ಕುಮಟಾ ತಾಲ್ಲೂಕಿನ ವಿದ್ಯಾರ್ಥಿ ಆಯ್ಕೆ ಆಗಿರುವುದು ಗಮನಾರ್ಹ ಸಾಧನೆಯಾಗಿದೆ.
ವಿದ್ಯಾರ್ಥಿಯ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು, ಪ್ರಾಂಶುಪಾಲರಾದ ಶ್ರೀ ಕಿರಣ ಭಟ್ಟರವರು ಹಾಗೂ ಎಲ್ಲಾ ಉಪನ್ಯಾಸಕ ವೃಂದದವರು ಹರ್ಷವನ್ನು ವ್ಯಕ್ತಪಡಿಸಿ ಮುಂದಿನ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.