ಕುಮಟಾ : ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಚಂದಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.

ಭೂಮಿಕಾ ವಿನಾಯಕ ನಾಯ್ಕ ಹಿಂದಿ ಕಂಠಪಾಠದಲ್ಲಿ ಪ್ರಥಮ ಮತ್ತು ಕವನವಾಚನದಲ್ಲಿ ದ್ವಿತೀಯ, ಹರ್ಷ ಗಣೇಶ ನಾಯ್ಕ ಧಾರ್ಮಿಕ ಪಠಣದಲ್ಲಿ ದ್ವಿತೀಯ, ತನುಶ್ರೀ ಕೃಷ್ಣ ಗೌಡ ಛದ್ಮವೇಷದಲ್ಲಿ ತೃತೀಯ, ಮಾನ್ಯ ಬಾಬು ನಾಯ್ಕ ಕಥೆ ಹೇಳುವುದರಲ್ಲಿ ದ್ವಿತೀಯ, ಕೀರ್ತನ ವಿನಾಯಕ ನಾಯ್ಕ ಚಿತ್ರಕಲೆಯಲ್ಲಿ ಪ್ರಥಮ ಮತ್ತು ಆಶುಭಾಷಣದಲ್ಲಿ ತೃತೀಯ, ದೀಪ್ತಿ ಜನಾರ್ಧನ ನಾಯ್ಕ ಭಕ್ತಿಗೀತೆಯಲ್ಲಿ ದ್ವಿತೀಯ, ಹರ್ಷ ಕೃಷ್ಣ ಗೌಡ ಮಿಮಿಕ್ರಿಯಲ್ಲಿ ತೃತೀಯ, ಧನುಷ ಲಕ್ಷ್ಮಣ ನಾಯ್ಕ ಚಿತ್ರಕಲೆಯಲ್ಲಿ ಪ್ರಥಮ, ಜನನಿ ಸುಧಾಕರ ನಾಯ್ಕ ಅಭಿನಯಗೀತೆಯಲ್ಲಿ ತೃತೀಯ, ಮಂಜೇಶ ಗುರುಪಾದ ನಾಯ್ಕ ಕ್ಲೇ ಮಾಡೆಲಿಂಗ್‍ನಲ್ಲಿ ದ್ವಿತೀಯ, ದಿವ್ಯಾ ಜನಾರ್ಧನ ನಾಯ್ಕ ಭಕ್ತಿ ಗೀತೆ ಮತ್ತು ಲಘು ಸಂಗೀತದಲ್ಲಿ ಪ್ರಥಮ, ಪ್ರೀತಮ ಶ್ರೀಕಾಂತ ನಾಯ್ಕ ಆಶುಭಾಷಣ ಮತ್ತು ಇಂಗ್ಲಿಷ್ ಕಂಠಪಾಠದಲ್ಲಿ ದ್ವಿತೀಯ, ಪ್ರತೀಕ ಉಲ್ಲಾಸ ಧಾರ್ಮಿಕ ಪಠಣ ಮತ್ತು ಕಥೆಹೇಳುವುದರಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. 

RELATED ARTICLES  ಮುಖಾಮುಖಿ ಡಿಕ್ಕಿಯಾದ ಲಾರಿಗಳು

ಒಟ್ಟು 24 ಸ್ಪರ್ಧೆಗಳಲ್ಲಿ 18 ಸ್ಪರ್ಧೆಗಳಲ್ಲಿ ವಿಜಯಶಾಲಿಗಳಾಗಿ, 7 ಸ್ಪರ್ಧೆಗಳಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಮುಖ್ಯಾಧ್ಯಾಪಕಿ ಶಾರದಾ ಶರ್ಮಾ, ಶಿಕ್ಷಕರಾದ ಜ್ಯೋತಿ ಶೇಟ್, ಭಾರತಿ ನಾಯ್ಕ, ಹನುಮಂತ ನಾಯ್ಕ ಮತ್ತು ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

RELATED ARTICLES  ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ