ಕುಮಟಾ : ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪ್ರಾಯೋಗಿಕ ಚಟುವಟಿಕೆಯಲ್ಲಿಯೂ ಕ್ರಿಯಾಶೀಲತೆ ಹೊಂದಿದ್ದರೆ ಅಂತವರು ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ಡಾ. ಎ.ವಿ. ಬಾಳಿಗಾ ಕಾಲೇಜಿನ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಸುಪಾಲೆ ವೀಣಾ ಕಾಮತ್ ಹೇಳಿದರು. ಅವರು ವಿದ್ಯಾರ್ಥಿಗಳಿಂದ ಪಠ್ಯ ವಿಷಯಗಳ ಸಂಬಂಧ ಪ್ರದರ್ಶನ ಮತ್ತು ಮಾರಾಟ ಪ್ರಾಯೋಗಿಕ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಯೋಗಿಕ ಪಾಠಗಳು ಬದುಕಿನ ಎಲ್ಲಾ ದೃಷ್ಟಿಕೋನವನ್ನು ಕಲಿಸುತ್ತದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಪಾಠಗಳು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಪದವಿಪೂರ್ವ ವಿದ್ಯಾರ್ಥಿಗಳಿಂದ ಮಾರುಕಟ್ಟೆ ಸಂಬಂಧಿತ ಜಾಹಿರಾತು, ರಂಗೋಲಿ, ಹಣ ವರ್ಗಾವಣೆ ಪರಿಕರಗಳ ಮಾದರಿ, ವಾಣಿಜ್ಯ ಬ್ಯಾಂಕ್ ಗಳ ಲೋಗೋ, ಜಗತ್ತಿನ ವಿವಿಧ ದೇಶಗಳ ಚಲಾವಣೆಯಲ್ಲಿ ಇರುವ ಕರೆನ್ಸಿ ಗಳು, ಬಂಡವಾಳ ಮಾರುಕಟ್ಟೆ ಚಟುವಟಿಕೆಗಳ ಪ್ರಾತ್ಯಕ್ಷಕೆಗಳು ಮತ್ತು ಪ್ರದರ್ಶನ ನಡೆಯಿತು.
ಮಂಡಲ ಆರ್ಟ್ ರಂಗೋಲಿ ಪ್ರದರ್ಶನವು ಅಮೋಘವಾಗಿ ಮೂಡಿಬಂದವು. ಭಾರತೀಯ ಕೇಂದ್ರ ಬ್ಯಾಂಕ್ ನ ಈ ವರೆಗಿನ ಗವರ್ನರ್ ಗಳ ಫೋಟೋವನ್ನು ಸಂಗ್ರಹಣೆ ಮಾಡಿ ಪ್ರದರ್ಶಿಸಿ ವಿವಿಧ ಕಾಲೇಜಿನಿಂದ ಆಗಮಿಸಿದ ವಿದ್ಯಾರ್ಥಿ ಸಮೂಹಕ್ಕೆ ಮತ್ತು ಉಪನ್ಯಾಸಕರುಗಳಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಂದಲೇ ತಯಾರಾದ ವಿವಿಧ ಆಹಾರ ತಿಂಡಿಗಳು ವಿದ್ಯಾರ್ಥಿ ಸಮೂಹದಿಂದ ಮಾರಾಟ ಪ್ರಕ್ರಿಯೆಗಳು ನಡೆದವು, ಸ್ಥಳೀಯ ಮಾರುಕಟ್ಟೆ ಯಲ್ಲಿ ಹೆಚ್ಚು ಬೇಡಿಕೆ ಇದ್ದ ಮಜ್ಜಿಗೆ, ಕ್ಯಾರೆಟ್ ಹಲ್ವಾ, ಪಾನಿಪುರಿ, ಲಿಂಬು ಜ್ಯೂಸ್, ಇತ್ಯಾದಿ ಅತಿಹೆಚ್ಚು ಬೇಡಿಕೆಯ ವಸ್ತುವಾಗಿ ಮಾರಾಟ ವಾಯಿತು.
ವಿಧಾರ್ಥಿಗಳ ಪ್ರಾಯೋಗಿಕ ಚಟುವಟಿಕೆ ಗೆ ಪ್ರೊ. ಅನ್ನಪೂರ್ಣ, ರಂಗೋಲಿ ಪ್ರದರ್ಶನಕ್ಕೆ ಪ್ರೊ. ಸುಷಮಾ ಕಾಮತ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಾಚಾರ್ಯ ಎನ್. ಜಿ. ಹೆಗಡೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆಗೆ ಮಾರ್ಗದರ್ಶನ ನೀಡಿ ಜಗತ್ತಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗವಕಾಶ ಇರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಬುಳ್ಳ, ಎಸ್.ಡಿ.ಎಂ ಕಾಲೇಜಿನ ಡಾ. ಮಹೇಶ ಭಟ್ಟ ಪ್ರದರ್ಶನ ಮಳಿಗೆಗೆ ಚಾಲನೆ ನೀಡಿದರು. ಯೂನಿಯನ್ ಕಾರ್ಯಧ್ಯಕ್ಷ ಯೋಗೀಶ್ ಭಟ್ಟ, ಪ್ರೊ. ಹೇಮಾ ಪೈ, ಪ್ರೊ. ವಿ. ಡಿ. ಭಟ್ಟ, ಪ್ರೊ. ಪ್ರೆಸಿಲ್ಲ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.