ಯಲ್ಲಾಪುರ : ತಾಲೂಕಿನ ಕಿರವತ್ತಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿದು ಸಾಗಿಸಿದ್ದ ಆರೋಪಿಗಳನ್ನು ಯಲ್ಲಾಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಸುಮಾರು ಅಂದಾಜು ಮೂರು ಲಕ್ಷ ರೂ ಮೌಲ್ಯದ ಕಟ್ಟಿಗೆಗಳನ್ನು ವಶಕ್ಕೆ
ಪಡೆಯಲಾಗಿದೆ.
ಕಿರವತ್ತಿ ವಲಯ ಅರಣ್ಯದಿಂದ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿದು ಸಾಗಿಸಿದ್ದ ಪ್ರಕರಣವನ್ನು ದಾಖಲಿಸಿಕೊಂಡ ಅರಣ್ಯ ಅಧಿಕಾರಿಗಳು ಅತ್ಯಾಧುನಿಕ ಸಿಡಿಆರ್,ಟಿಡಿಆರ್ ಮೊಬೈಲ್ ತಂತ್ರಜ್ಞಾನದ ಮೂಲಕ ಪ್ರಕರಣವನ್ನು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಮೆಹಬೂಬ್ ಸಾಬ್ ರಾಜೇ ಸಾಬ್ ಗುಡಿಸಲಮನಿ ಹಾಗೂ ದಾವಲ ಸಾಬ್ ,ಮೌಲಾ ಸಾಬ್ ಬ್ಯಾಳಿ ಎಂಬುವವರನ್ನು ಬಂಧಿಸಿದ
ತನಿಖಾ ತಂಡದವರು ಬೆಳಗಾವಿ ತಾಲೂಕಿನ ಬಾಗೇವಾಡಿ ಗ್ರಾಮಕ್ಕೆ ತೆರಳಿ, ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸಾಗವಾನಿ ಜಾತಿಯ 11 ನಾಟಾಗಳನ್ನು ಜಪ್ತಿಮಾಡಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ಆರೋಪಿಗಳ
ಪತ್ತೆಗೆ ಶೋಧಕಾರ್ಯ ನಡೆದಿದೆ. ಡಿಸಿಎಫ್
ಎಸ್.ಜಿ.ಹೆಗಡೆ ಹಾಗೂ ಏಸಿಎಫ್ ಆನಂದ ಅವರ
ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಿರವತ್ತಿ ಆರ್.ಎಫ್.ಒ ಡಿಎಲ್ ಮಿರ್ಜಾನಕರ್, ಡಿಆರ್ ಎಫ ಒ ಮಂಜುನಾಥ ಗೌಡ,ಮಂಜುನಾಥ ಕಾಂಬ್ಳೆ, ವಿನಯ್ ರಾಮನಗೊಟ್ಟಿ,ಕಿರಣಕುಮಾರ್ನಾಯ್ಕ, ಪ್ರಶಾಂತ ಪಟಗಾರ್, ಗಸ್ತು ಅರಣ್ಯ ಪಾಲಕರಾದಶ್ರೀಧರ ಭಜಂತ್ರಿ,ಮಲ್ಲಪ್ಪ ಹುಚ್ಚನ್ನವರ್,ಮುಂತಾದವರು ಪಾಲ್ಗೊಂಡಿದ್ದರು.