ಕುಮಟಾ: ಹೆಸ್ಕಾಂ, ಕುಮಟಾ ಉಪವಿಭಾಗದ ವ್ಯಾಪ್ತಿಯಲ್ಲಿ ಸೆ.೧೩ ರಂದು ಗೋಕರ್ಣ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣೆ ಹಾಗೂ ಜಂಗಲ್ ಕಟಿಂಗ್, ಮರಾಕಲ್ ಶಾಖೆಯ ೧೧ ಕೆ.ವಿ ಮಾರ್ಗ ನಿರ್ವಹಣೆ ಹಾಗೂ ಜಂಗಲ್ ಕಟಿಂಗ್, ಮತ್ತು ನಗರ ಶಾಖೆಯ ೧೧ ಕೆವಿ ಮಾರ್ಗದಲ್ಲಿ ಐ.ಆರ್.ಬಿ ಕಂಪನಿಯ ಕಾಮಗಾರಿ ಇರುವುದರಿಂದ, ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜೂರು, ಓಂ ಬೀಚ್, ಗಂಗಾವಳಿ, ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಉಳ್ಳೂರುಮಠ, ಮೂರೂರು, ಚಿತ್ರಗಿ ಫೀಡರಿನ ಎಲ್ಲಾ ಭಾಗಗಳಲ್ಲಿ ಬೆಳಿಗೆ ೯.೩೦ ರಿಂದ ಸಂಜೆ ೪:೩೦ರ ಹಾಗೂ ಕೈಗಾರಿಕಾ ವಲಯ ಫೀಡರನ ೧೧ ಕೆ.ವಿ ಮಾರ್ಗದಲ್ಲಿ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ನಿಲುಗಡೆ ಮಾಡಲಾಗುವುದು ಎಮದು ಸಹಾಯಕ ಅಭಿಯಂತರರು ತಿಳಿಸಿದ್ದಾರೆ.