ಕುಮಟಾ : ೨೦೨೩-೨೪ನೇ ಸಾಲಿನ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ ೧೪ ರಂದು ತಾಲೂಕಿನ ಕಡ್ಲೆಯ ಗಾಮಧಿವನ  ಮೈದಾನದಲ್ಲಿ ಏರ್ಪಡಿಸಲಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಾಪಂ ಕ್ರೀಡಾಧಿಕಾರಿ ರಾಘವೇಂದ್ರ ಗಾಂವಕರ್ ತಿಳಿಸಿದ್ದಾರೆ. 

ಪುರುಷರ ವಿಭಾಗದ ೧೦೦ ಮೀ, ೨೦೦ ಮೀ, ೪೦೦ ಮೀ, ೮೦೦ ಮೀ, ೧೫೦೦ ಮೀ, ೫೦೦೦ ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಎಸೆತ, ಡಿಸ್ಕಸ್ ಎಸೆತ, ೧೧೦ ಮೀ ಹರ್ಡಲ್ಸ್, ಯೋಗ ಹಾಗೂ ಗುಂಪು ಸ್ಪರ್ಧೆಗಳಾದ  ೪*೧೦೦ ಮೀ ರಿಲೇ ಮತ್ತು ೪*೪೦೦ ಮೀ ರಿಲೇ ಓಟ, ವಾಲಿಬಾಲ್, ಕಬ್ಬಡಿ, ಖೋ-ಖೋ, ಪುಟ್ಬಾಲ್, ಪ್ರೋಬಾಲ್.

RELATED ARTICLES  ಹೊನ್ನಾವರ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂಮಿ ನೀಡಬಯಸುವವರಿಗಾಗಿ ಅರ್ಜಿ ಆಹ್ವಾನ

ಮಹಿಳೆಯರ ವಿಭಾಗದಲ್ಲಿ ೧೦೦ ಮೀ, ೨೦೦ ಮೀ, ೪೦೦ ಮೀ, ೮೦೦ ಮೀ, ೧೫೦೦ ಮೀ, ೩೦೦೦ ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜೆವಲಿನ್ ಎಸೆತ, ಡಿಸ್ಕಸ್ ಎಸೆತ, ೧೦೦ ಮೀ ಹರ್ಡಲ್ಸ್, ಯೋಗ ಮತ್ತು ಗುಂಜು ಸ್ಪರ್ಧೆಗಳಾದ ೪*೧೦೦ ಮೀ ರಿಲೇ, ೪*೪೦೦ ಮೀ ರಿಲೇ ಓಟ, ವಾಲಿಬಾಲ್, ಕಬ್ಬಡಿ, ಖೋ-ಖೋ, ಪ್ರೋಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 

RELATED ARTICLES  Job News - ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಇಲಾಖೆಯಿಂದ ಯಾವುದೇ ಭತ್ಯೆ  ನೀಡಲಾಗುವುದಿಲ್ಲ. ಕ್ರೀಡಾಕೂಟದಲ್ಲಿ ರಕ್ಷಣಾಪಡೆ, ಅರರಕ್ಷಣಾಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆ ೧೪ ರಂದು ಬೆಳಿಗ್ಗೆ ೯,೦೦ ಗಂಟೆಯ ಒಳಗಾಗಿ ಗಾಂಧಿವನ ಕಡ್ಲೆ ಕ್ರೀಡಾಂಗಣದಲ್ಲಿ ಹಾಜರಿದ್ದು, ಹೆಸರು ನೋಂದಾಯಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ತಾಪಂ ಕ್ರೀಡಾಧಿಕಾರಿ ಅವರ ಮೊಬೈಲ್ ನಂಬರ್ ೯೩೮೦೧೦೭೫೦೯, ೯೪೮೨೪೯೬೩೪೨ ಸಂಪರ್ಕಿಸಬಹುದಾಗಿದೆ.