ಕುಮಟಾ : ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ ಮೂರೂರು ಇದರ ನೇತೃತ್ವದಲ್ಲಿ, ಕಂದವಳಿಯ ಸ್ಕಂದಮಾತಾ ದೇವಾಲಯದ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಪರಿಷ್ಕರಣೆ ಹಕ್ಕುತ್ತಾಯದ ಸಭೆ ಸೋಮವಾರ ಮಧ್ಯಾಹ್ನ ಸಂಪನ್ನಗೊಂಡಿತು.

ಕುಮಟಾ ತಾಲೂಕಿನ 14 ಪಂಚಾಯಿತಿಗಳ 53 ಗ್ರಾಮಗಳಿಗೆ 169 ಕೋಟಿ ವೆಚ್ಚದಲ್ಲಿ ಜಾರಿ ಮಾಡಲು ಹೊರಟಿರುವ ಕುಡಿಯುವ ನೀರಿನ ಯೋಜನೆಯ ಆಗು ಹೋಗುಗಳ ಕುರಿತಾಗಿ ಚಿಂತಿಸಿ ವಿಜ್ಞಾನಿಗಳಿಂದ ಸಲಹೆ ಪಡೆಯಲಾಯಿತು. 

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಘನಾಶಿನಿ ಉಳಿಸಿ ವಿಚಾರವಾಗಿ ಪ್ರಧಾನ ಭಾಷಣ ಮಾಡಿದರು. ವಿಜ್ಞಾನಿಗಳಾದ ಪ್ರೋ. ಸುಭಾಸ್ ಚಂದ್ರನ್, ಡಾ. ಬಾಲಚಂದ್ರ ಸಾಯಿಮನೆ, ನಾರಾಯಣ ಗಡೀಕೈ, ಡಾ. ಪ್ರಕಾಶ್ ಮೇಸ್ತ, ಡಾ. ಮಹಾಬಲೇಶ್ವರ ಹೆಗಡೆ, ಡಾ. ಕೇಶವ ಹೆಚ್. ಕೊರ್ಸೆ ಹಾಗೂ ರೈತ ಮುಖಂಡರು, ಗ್ರಾಮಪಂಚಾಯತ ಪ್ರತಿನಿಧಿಗಳು ಈ ಸಭೆಯಲ್ಲಿ  ಅಭಿಪ್ರಾಯ ಮಂಡನೆ ಮಾಡಿದರು. 

ಪ್ರೋ. ಮಹೇಶ್ ಅಡ್ಕೋಳಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ತಿಮ್ಮಪ್ಪ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿದರು. ಗಣಪತಿ ಗೌಡ ಸ್ವಾಗತಿಸಿದರು, ಡಾ.‌ಸುರೇಶ ಹೆಗಡೆ ರೈತರ ನಿರ್ಣಯ ಮಂಡಿಸಿದರು, ವಿ.ಎಸ್ ಹೆಗಡೆ ಕೋಣಾರೆ, ವಿ.ಪಿ ಹೆಗಡೆ, ಮದನ ನಾಯ್ಕ, ಗಿರಿಯಾ ಗೌಡ ಇದ್ದರು.

RELATED ARTICLES  ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರೇ? ಹಾಗಾದರೆ ಸದ್ಯವೇ ನಿಮ್ಮ ಈ ಸೇವೆ ರದ್ದಾಗಲಿದೆ!

ಸಭೆಯ ಪ್ರಮುಖಾಂಶಗಳು.

* ಅಘನಾಶಿನಿ ನದಿಯಿಂದ ನೀರನ್ನು ಎತ್ತಿ ಕುಮಟಾ ತಾಲೂಕಿನ 53 ಹಳ್ಳಿಗಳಿಗೆ ನೀರು ಒದಗಿಸುವ ನೀರಿನ ಯೋಜನೆಯನ್ನು ಸರ್ಕಾರ ಪರಿಷ್ಕರಿಸಬೇಕು. ದೀವಳ್ಳಿ ಬಹುಗ್ರಾಮ ಕುಡಿಯುವ ಜಲಮೂಲ ಸ್ಥಳ ಬದಲಾಯಿಸಿ ಬುಗ್ರಿಬೈಲ್ ಸ್ಥಳದಿಂದ ಅಘನಾಶಿನಿ ನೀರನ್ನು ಎತ್ತಿ ಸಾಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವುದು.

* ಕುಮಟಾ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗ ಇರುವಂತೆ ಜಾರಿಯಾದರೆ ಬೇಸಿಗೆಯ 3 ತಿಂಗಳು ನೀರೇ ಇಲ್ಲದೇ ಸಂಪೂರ್ಣ ವಿಫಲವಾಗಲಿದೆ ಎಂದು ರೈತರ ಹಕ್ಕೊತ್ತಾಯ ಸಮಾವೇಶ ಅಭಿಪ್ರಾಯ ಪಟ್ಟಿದೆ.

* ಕುಮಟಾ ನಗರ ಕುಡಿಯುವ ನೀರಿನ ಯೋಜನೆ ಹಾಗೂ ಏತ ನೀರಾವರಿ ಯೋಜನೆಗೆ ಈಗಾಗಲೇ ಬೇಸಿಗೆಯಲ್ಲಿ ನೀರಿಲ್ಲದೇ ಭಾರೀ ತೊಂದರೆ ಉಂಟಾಗಿದೆ. ಬಹುಗ್ರಾಮನೀರಿನ ಯೋಜನೆ ಜಾರಿಯಾದರೆ ಈ ಮೂರು ನೀರಿನ ಯೋಜನೆಗಳು ಬಂದ್ ಆಗಲಿವೆ ಎಂದು ರೈತರ ಸಮಾವೇಶ ಎತ್ತಿ ಹೇಳಿದೆ.

* ಸರ್ಕಾರ ಅಘನಾಶಿನಿ ನದಿ ತೀರದ ರೈತರ ಕೃಷಿ ನೀರಿನ ಬಳಕೆ, ಕುಡಿಯುವ ನೀರು ಹಕ್ಕಿಗೆ ಭಂಗ ತರಬಾರದು. ಈಗಾಗಲೇ ದೀವಳ್ಳಿ ಕೆಳಭಾಗದ ಅಘನಾಶಿನಿ ತೀರದ ಸಾವಿರಾರು ರೈತರು ಬೇಸಿಗೆಯಲ್ಲಿ ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ಎಂದು

RELATED ARTICLES  ರೈಲು ಹಳಿ ದಾಟುವಾಗ ದುರ್ಘಟನೆ : ಮುರ್ಡೇಶ್ವರ ಸಮೀಪ ವ್ಯಕ್ತಿ ಸಾವು

ಹಕ್ಕೊತ್ತಾಯ ಸಭೆ ಅಗ್ರಹಿಸಿದೆ.

* ಬೇಸಿಗೆಯಲ್ಲಿ ಅಘನಾಶಿನಿ ನದಿಯಲ್ಲಿ ನೀರು ಹರಿಯುವಿಕೆ ನಿಲ್ಲುವದರಿಂದ ಉಪ್ಪುನೀರು ಕೆಳಭಾಗದಿಂದ ಮೇಲಿನ ಭಾಗಕ್ಕೆ ಪಸರಿಸುತ್ತದೆ. ಇದರಿಂದ ಅಘನಾಶಿನಿಯ ರೈತರು, ಮೀನುಗಾರರು ಸಿಹಿನೀರಿನ ಅಲಭ್ಯತೆಯಿಂದ ವಂಚಿತರಾಗಲಿದ್ದಾರೆ. ಅವರ ಬದುಕು ಅತಂತ್ರವಾಗಲಿದೆ ಎಂದು ಹಕ್ಕೊತ್ತಾಯ ಸಭೆ ತೀವ್ರ ಕಳವಳ ವ್ಯಕ್ತಪಡಿಸಿದೆ.

* ಈ ಎಲ್ಲ ಗಂಭೀರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಘನಾಶಿನಿಯ ಬುಗ್ರಿಬೈಲ್ ಸ್ಥಳದಿಂದ ನೀರೆತ್ತುವಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪರಿಷ್ಕತಗೊಳಿಸಬೇಕು ಎಂದು ರೈತರ ಸಭೆ ಒತ್ತಾಯ ಮಾಡಿದೆ.

* ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿಯನ್ನು ಈಗಾಗಲೇ 5 ಗ್ರಾಮಪಂಚಾಯತಗಳು ವಿರೋಧಿಸಿ, ನಿಲ್ಲಿಸಿವೆ. ಎಲ್ಲ ಪಂಚಾಯತಗಳ ವ್ಯಾಪ್ತಿಯಲ್ಲಿ ಈ ಯೋಜನೆಯ ಕಾಮಗಾರಿ ಸ್ಥಗಿತವಾಗಬೇಕೆಂದು ರೈತರ ಸಭೆ ಒತ್ತಾಯಿಸಿದೆ.

* ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಗ್ರಾಮಪಂಚಾಯತಗಳ ಒಪ್ಪಿಗೆ ಪಡೆದಿಲ್ಲ. ಯೋಜನೆ ಪರಿಷ್ಕಾರ ಮಾಡಿ ಒಪ್ಪಿಗೆ ಪಡೆಯಬೇಕು.

* ಈ ನಿರ್ಣಯವನ್ನು ಜಾರಿಯಾಗಿಸಲು ಶ್ರಮಿಸುವ ಹಾಗೂ ಎಲ್ಲಾ ಪಕ್ಷದ ಪ್ರಮುಖರು ಇದನ್ನು ಬೆಂಬಲಿಸುವಂತೆ ಮಾಡುವ ಬಗ್ಗೆ ಚರ್ಚಿಸಲಾಗಿದೆ‌.