ಕುಮಟಾ : ಪ್ರೌಢಶಾಲೆಗಳ ತಾಲೂಕು ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಸ್ಥಳೀಯ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯಮೋಘ ಪ್ರದರ್ಶನ ನೀಡಿ ವೈಯಕ್ತಿಕ ವೀರಾಗ್ರಣಿ ಯೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕೀಯರ ವೈಯಕ್ತಿಕ ವಿಭಾಗದಲ್ಲಿ ಕುಮಾರಿ ಸುಪ್ರಿಯಾ ಶಂಕರ್ ಗೌಡ 100 ಮೀಟರ್ ಓಟ, 200 ಮೀ. ಓಟ ಹಾಗೂ 400 ಮೀ. ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದಿರುತ್ತಾಳೆ. ಕುಮಾರಿ ರುಚಿ ಎಂ. ನಾಯ್ಕ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ಪ್ರಥಮ ಸ್ಥಾನ, ಹಾಗೂ ಬಾಲಕರ ವಿಭಾಗದಲ್ಲಿ ಎಚ್. ಡಿ. ನಿರಂಜನ್ ಚಕ್ರ ಎಸೆತ ಪ್ರಥಮ ಸ್ಥಾನ ಪಡೆದಿರುತ್ತಾರೆ.