ಕುಮಟಾ : ತಾಲೂಕಿನ ಕಂಡಗಾರ್ ರೈಲ್ವೆ ಗೇಟ್ ಸಮೀಪದಲ್ಲಿ ರೈಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದ ವ್ಯಕ್ತಿ ಒದ್ದಾಡಿ ಕೊನೆಯುಸಿರೆಳೆದಿದ್ದಾನೆ. ತಾಲೂಕಿನ ಮಿರ್ಜಾನ್ ಮೂಲದ ಸಂದೇಶ ಅಂಬಿಗ (30) ಮೃತ ವ್ಯಕ್ತಿ ಈತನ ಕಾಲಿನ ಭಾಗದಲ್ಲಿ ಗಾಯದ ಗುರುತುಗಳಿದ್ದು, ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಸ್ಥಳಕ್ಕೆ ಕುಮಟಾ ಪಿಎಸ್‍ಐ ಸಂಪತ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.