ದಾಂಡೇಲಿ:ನಗರದ ಬಾಂಬೆಚಾಳದ ಸಾಮಾಜಿಕ ಕಾರ್ಯಕರ್ತೆ ಹಸಿನಾ ಮಕಾನ್ದಾರ, ಹಾಗೂ ಬಿಜೆಪಿ
ಮುಖಂಡ ಅಬ್ದುಲ್ ರ ಝಾಕ ಜುಂಜವಾಡ್ಕರ ಅವರ ನೇತೃತ್ವದಲ್ಲಿ ಹಲವು ಮುಸ್ಲಿಂ ಮಹಿಳೆಯರು ಬುಧವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷದ ಕಾರ್ಯಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆಯವರು ಅವರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆಯವರು ಭಾರತೀಯ ಜನತಾ ಪಕ್ಷ ಅಲ್ಪಸಂಖ್ಯಾತರ ಪಕ್ಷ ಅಲ್ಲ ಎಂದು ವ್ಯವಸ್ಥಿತವಾಗಿ ಬಿಂಬಿಸಲಾಗುತ್ತಿದೆ. ಆದರೆ ಅದು ಕಾಂಗ್ರೆಸ್‍ನವರ ಹೇಡಿತನದ ರಾಜಕಾರಣವಾಗಿದೆ. ಜಾತಿ ಆಧಾರದಲ್ಲಿ ರಾಜಕೀಯ ಮಾಡುವವರು ಕಾಂಗ್ರೆಸ್ಸಿಗರೇ ಹೊರತು ಬಿ.ಜೆ.ಪಿ.ಯವರಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಹಲವು ಜನಪರ ಯೋಜನೆಗಳು ಕೇವಲ ಹಿಂದು ಸಮುದಾಯವರಿಗಷ್ಟೇ ಸೀಮಿತವಾಗಿಲ್ಲ. ಅದು ಇಡೀ ಭಾರತವಾಸಿಗಳಿಗೆ ಅನ್ವಯವಾಗುತ್ತದೆ. ಈ ದೇಶದ ರಾಷ್ಟ್ರೀಯತೆಯನ್ನು ಒಪ್ಪಿಕೊಂಡವರೆಲ್ಲರೂ ಸಹ ಭಾರತೀಯರೇ ಆಗುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಸ್ಲಿಂರಿಗಾಗಿ, ದಲಿತರಿಗಾಗಿ ಏನನ್ನೂ ಮಾಡಿಲ್ಲ. ಕೇವಲ ಮತ ರಾಜಕೀಯಕ್ಕೆ ಅವರನ್ನು ಬಳಸಿಕೊಂಡಿದ್ದಾರೆ. ಅಬ್ದುಲ್ ಕಲಾಂರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿ.ಜೆ.ಪಿ ಸರಕಾರವೇ ಹೊರತು ಕಾಂಗ್ರೆಸ್ ಅಲ್ಲ. ತಲಾಕ ರದ್ದುಪಡಿಸುವ ವಿಚಾರದಿಂದ ಹಿಡಿದು ಹಲವು ಕಾನೂನುಗಳು ಬಿ.ಜೆ.ಪಿ ಸರಕಾರದಿಂದಾಗಿಯೇ ಅಲ್ಪಸಂಖ್ಯಾತರಿಗಾಗಿ ಅನುಕೂಲವಾಗುವಂತೆ ಜಾರಿಯಾಗಿದೆ.

RELATED ARTICLES  ಸಕಲ ಸರ್ಕಾರಿ ಗೌರವದೊಂದಿಗೆ ಶಾಸಕ ವೈ.ಎನ್. ರುದ್ರೇಶ್‍ಗೌಡರ ಪಾರ್ಥಿವ ಶರೀರದ ಅಂತ್ಯಕ್ರಿಯೆ.

ಹಲವೆಡೆ ಮುಸ್ಲಿಂ ಬಾಂದವರು ಸ್ವಯಂ ಪ್ರೇರಣೆಯಿಂದ ಬಿ.ಜೆ.ಪಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದು, ದಾಂಡೇಲಿಯಲ್ಲಿಯೂ ಸಹ ಈಗ ಇದಕ್ಕೆ ಹೊಸ ಮುನ್ನುಡಿ ಬರೆದಿರುವುದು ಸಂತಸ ತಂದಿದೆ ಎಂದರು.
ನಗರ ಯೋಜನ ಪ್ರಾಧಿಕಾರದ ಮಾಜಿ ಅಧಕ್ಷ ಅಶೋಕ ಪಾಟೀಲ, ಜೋಯಿಡಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಾಣಿ ಪೈ ಮಾತನಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಿ.ಜೆ.ಪಿಯನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

RELATED ARTICLES  ದೀವಗಿಯಲ್ಲಿ ಗಮನ ಸೆಳೆದ ಕಲಿಕಾ ಹಬ್ಬ.

ಕಾರ್ಯಕ್ರಮದಲ್ಲಿ ದಾಂಡೇಲಿ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಹಳಿಯಾಳ ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಮಹಮ್ಮದ್ ರಫಿಕ್ ಹುದ್ದಾರ, ದಾಂಡೇಲಿ ಘಟಕದ ಅದ್ಯಕ್ಷ ರಿಯಾಜ ಖಾನ್, ಹಳಿಯಾಳ ಘಟಕದ ಅಧ್ಯಕ್ಷ ಇಲಿಯಾಸ, ಹಳಿಯಾಳ ಮಹಿಳಾ ಮೋರ್ಚಾ ಆದ್ಯಕ್ಷೆ ರಾಖಿ ಮಿಂಡೋಳ್ಕರ, ದಾಂಡೇಲಿ ಮಹಿಳಾ ಮೋರ್ಚಾ ಅದ್ಯಕ್ಷೆ ದೇವಕ್ಕ ಕೆರೆಮನಿ, ಹಳಿಯಾಳ ಘಟಕದ ಕಾರ್ಯದರ್ಶಿ ವಿ.ಎಮ್. ಪಾಟೀಲ, ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ, ಪ್ರಮುಖರಾದ ರವೀಂದ್ರ ಷಾ, ಜಯಲಕ್ಷ್ಮಿ ಚೌಗಲಾ, ಅಬ್ದುಲ್ ರಜಾಕ್ ಜುಂಜವಾಡಕರ, ಭೀಮಶಿ ಬಾದೋಳಿ, ಅನ್ನಪೂರ್ಣಾ ದಾಬಲ್ಕರ, ಅನಸೂಯ ರಜಪೂತ, ರಮಾ ರವೀಂದ್ರ, ರಾಧಾ ಇಂಗೋಲೆ ಮುಂತಾದವರಿದ್ದರು.