ಶಿರಸಿ: ತಾಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡಿನಕೊಪ್ಪ ರಸ್ತೆ ಪಕ್ಕದ ಅರಣ್ಯದಲ್ಲಿ ಶವವೊಂದು ಪತ್ತೆಯಾಗಿದೆ. ಅಜಮಾಸು 45 ರಿಂದ 50 ವರ್ಷ ವಯಸ್ಸಿನ ಗಂಡಸಿನ ಮೃತದೇಹದ ಮೇಲೆ ಗೋಣಿಚೀಲ ಹಾಗು ಸೊಪ್ಪಿನಿಂದ ಮುಚ್ಚಿಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಯಾರೋ ಕೊಲೆಗೈದು ರಸ್ತೆಬದಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸಿಪಿಐ ರಾಮಚಂದ್ರ ನಾಯಕ್ ಹಾಗು ಬನವಾಸಿ ಪಿಎಸ್ಐ ಚಂದ್ರಕಲಾ ಪತ್ತಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

RELATED ARTICLES  ಮಾತೃತ್ವಮ್ ವತಿಯಿಂದ ಬಜಕೂಡ್ಳು ಅಮೃತಧಾರಾ ಗೋಶಾಲೆಗೆ ಹಿಂಡಿ ಸಮರ್ಪಣೆ