ಕುಮಟಾ : ಹಿಂದಿ ಭಾಷೆ  ನಮ್ಮ ದೇಶದ ಜನಸಂಖ್ಯೆಯ ಬಹುಪಾಲು ಜನರು ಮಾತನಾಡುವ ಭಾಷೆಯಾಗಿದ್ದು, ಸರಳ ಭಾಷೆಯಾಗಿದೆ ಎಂದು ಕುಮಟಾ ಲಯನ್ಸ್ ಕ್ಲಬ್ ನ ಅಧ್ಯಕ್ಷ ದಾಮೋದರ ಭಟ್ಟ ಹೇಳಿದರು. ಅವರು ಲಯನ್ಸ್ ಕ್ಲಬ್ ಕುಮಟಾ ಹಾಗೂ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮಿರ್ಜಾನ್ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಹಿಂದಿ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

RELATED ARTICLES  ಶ್ರೀವೀರಾಂಜನೇಯ ಪ್ರತಿಷ್ಠಾನದ ಎರಡನೇ ವರ್ಷದ “ವೀರಾಂಜನೇಯ ಪುರಸ್ಕಾರ" ಪ್ರದಾನ

ಹಿಂದಿ ಸರಳ ಭಾಷೆ, ನಾನು ಕೂಡ ಅಗತ್ಯ ಸಂದರ್ಭದಲ್ಲಿ ಹಿಂದಿಯಲ್ಲೇ ವ್ಯವಹರಿಸುತ್ತೇನೆ. ಜನರು ಭಾಷಾ ಬಾಂಧವ್ಯ ಬೆಳೆಸಿಕೊಳ್ಳುವುದರ ಬಗ್ಗೆ ಗಮನ ನೀಡಬೇಕು. ಯಾವುದೇ ಭಾಷೆಯನ್ನು ವಿರೋಧಿಸುವುದಾಗಲಿ ಅಥವಾ ಹೀಗಳೆಯುವುದಾಗಲಿ ಸಲ್ಲದು ಎಂದು ಅವರು ಹೇಳಿದರು.

ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ವಿಷ್ಣು ಪಟಗಾರ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದಿಯನ್ನು  ಕಲಿತರೆ ಉತ್ತರ ಮತ್ತು ದಕ್ಷಿಣ ಬಾರತದಲ್ಲಿ ವ್ಯವಹರಿಸಲು ತುಂಬಾ ಸುಲಭ ಎಂದರು. ಬಿಜಿಎಸ್ ಶಾಲೆಯ ಆಡಳಿತಾಧಿಕಾರಿ ಜಿ. ಮಂಜುನಾಥ ಮಾತನಾಡಿದರು. ಹಿರಿಯ ಶಿಕ್ಷಕರಾದ ಎಂ. ಜಿ ಹಿರೇಕುಡಿ, ಪ್ರಾಂಶುಪಾಲೆ ಲೀನಾ ಎಂ. ಗೋನೆಹಳ್ಳಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿಂದಿ ದಿವಸದ ನಿಮಿತ್ತ ಹಲವಾರು ಸ್ಪರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

RELATED ARTICLES  ಪ ಪೂ ಮಾತೋಶ್ರೀ ರಾಜೇಶ್ವರಿ ತಾಯಿಯವರಿಗೆ ಗೋಕರ್ಣ ಗೌರವ