ಕುಮಟಾ : ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಡಾ. ಬಿ.ಎಂ.ಪೈ ಚ್ಯಾರಿಟೇಬಲ್ ಫೌಂಡೇಶನ್ ಕುಮಟಾ ಇದರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗಲೆಗೆ ಅವಶ್ಯವಿರುವ ವಾಟರ್ ಪ್ಯುರಿಫೈಯರ್, ಫ್ಯಾನ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ನೀಡಲಾಯಿತು.
ಜೊತೆಗೆ ಶಾಲಾ ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳು, ಭಗವದ್ಗೀತೆಯ ಪುಸ್ತಕ, ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಂಡೇಶನ್ ಮೆನೆಜಿಂಗ್ ಟ್ರಸ್ಟಿ ಎಂ.ಬಿ.ಪೈ ವಹಿಸಿದ್ದರು. ಶಾಲಾ ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಗುಣಪು ನಾಗು ಗೌಡ ಮತ್ತು ಎಂ.ಎನ್ ಭಟ್ಟ ವೇದಿಕೆಯಲ್ಲಿದ್ದರು.
ಫೌಂಡೇಶನ್ ನ ಟ್ರಸ್ಟಿಗಳಾದ ಶ್ರೀಕಾಂತ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇನ್ನೋರ್ವ ಟ್ರಸ್ಟಿ ಕೃಷ್ಣ ಪೈ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ರಂಜನಾ ಹೆಗಡೆ ಈ ಕೊಡುಗೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿ, ತಮ್ಮ ಅನಿಸಿಕೆ ಹಂಚಿಕೊಂಡರು. ಸಹ ಶಿಕ್ಷಕಿ ಸವಿತಾ ನಾಯ್ಕ ವಂದನಾರ್ಪಣೆಗೈದರು.