ಮುರ್ಡೇಶ್ವರ: ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆರ್.ಎಸ್.ಎಸ್.ಪಾಲಿಟೆಕ್ನಿಕ್ ಕಾಲೇಜು ಮುರ್ಡೇಶ್ವರದ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಓರ್ವರಾದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಹಿನ್ನೆಲೆಯಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರ ಸಂಸ್ಮರಣೆ ಕಾರ್ಯಕ್ರಮವು ಇಲ್ಲಿನ ಆರ್. ಎನ್. ಎಸ್. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಆರ್.ಎನ್.ಎಸ್. ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ದಿನೇಶ ಗಾಂವಕರ್ ಮಾತನಾಡಿ ವಿಶ್ವೇಶ್ವರಯ್ಯ ಅವರು ಈ ನಾಡಿಗೆ ಕೊಟ್ಟ ಕೊಡುಗೆ ಶಾಶ್ವತವಾಗಿ ನೆನಪಿಡುವಂಥದ್ದು. ಕನ್ನಡ ನಾಡು ನುಡಿಯ ಕುರಿತು ಅಪಾರ ಅಭಿಮಾನ ಹೊಂದಿದ್ದ ಅವರು ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಬದುಕು ಸಾಧನೆ ನಮಗೆಲ್ಲಪ್ರೆರಣೆ ಎಂದರಲ್ಲದೇ ವಿದ್ಯಾರ್ಥಿಗಳು ಅವರ ಬದುಕು ಮತ್ತು ಸಾಧನೆಯಿಂದ ಪ್ರೇರಿತರಾಗಿ ಸಾಧಕರಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರ್.ಎನ್.ಎಸ್.ಪಾಲಿಟೆಕ್ನಿಕ್ ಕಾಲೆಜಿನ ಪ್ರಾಂಶುಪಾಲ ಸಂತೋಷ ಆರ್.ಎ., ಸಾಹಿತಿ ಮಾನಾಸುತ ಶಂಭು ಹೆಗಡೆ ಕನ್ನಡನಾಡಿಗೆ ವಿಶ್ವೇಶ್ವರಯ್ಯ ಅವರ ಕೊಡುಗೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು.
ಉಪನ್ಯಾಸಕ ಶಂಕರನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಬಂಢಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ ಕಾಲೇಜಿನ ಉಪಪ್ರಾಂಶುಪಾಲ ಕೆ.ಮರಿಸ್ವಾಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.