ಮುಂಡಗೋಡ: ತಾಲೂಕಿನ ಉಗ್ಗಿನಕೇರಿ ನಂದಿಕಟ್ಟ ರಸ್ತೆ ಸೇತುವೆ ಹತ್ತಿರ ತಡರಾತ್ರಿ ಟಾಟಾ ಸುಮೋದಲ್ಲಿ ಅಕ್ರಮವಾಗಿ ಸಾಗವಾನಿ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯಧಿಕಾರಿಗÀಳು ಮತ್ತು ಸಿಬ್ಬಂದಿ ದಾಳಿ ಮಾಡಿ ತುಂಡುಗಳ ಸಮೇತ ವಾಹನ ಮತ್ತು ಓರ್ವ ಆರೋಪಿಯನ್ನು ಬಂಧಿಸಿದ್ದು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಭರತೇಶ ರಾಮಪ್ಪ ನರೇಂದ್ರ, ಎಂದು ತಿಳಿದುಬಂದಿದೆ. ಬಸುವರಾಜ ರಾಯನಾಳ, ಶೇಕಪ್ಪ ಹೋನ್ನಳ್ಳಿ, ಪರಾರಿಯಾದ ಆರೋಪಿಗಳಾಗಿದ್ದಾರೆ. ಈ ಮೂವರು ಕಲಘಟಗಿ ತಾಲೂಕಿನವರಾಗಿದ್ದು ದ್ಯಾಮಣ್ಣ ಕಮ್ಮಾರ, ಈತ ತಾಲೂಕಿನ ಉಗ್ಗಿನಕೇರಿದವನಾಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ರಾತ್ರಿ 11 ಗಂಟೆಯ ಸುಮಾರಿಗೆ ಉಗ್ಗಿನಕೇರಿ ನಂದಿಕಟ್ಟ ಮಾರ್ಗವಾಗಿ ತೆರಳುತ್ತಿದ್ದ ಟಾಟಾ ಸುಮೋ (ಕೆಎ.25 ಎನ್ 8392)ವಾಹನವನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದರಲ್ಲದೇ, ವಾಹನದಲ್ಲಿ ಸಾಗಿಸುತ್ತಿದ್ದ ಅಂದಾಜು 50 ಸಾವಿರ ಮೌಲ್ಯದ ಸಾಗವಾನಿ ತುಂಡುಗಳನ್ನು ವಾಹನದೊಂದಿಗೆ ವಶಪಡಿಸಿಕೊಂಡಿದ್ದಾರೆ.
ಸಹಾಯಕ ಅರಣ್ಯ ಅಧಿಕಾರಿ ಶಶಿಧರ ಮಾರ್ಗದರ್ಶನದಲ್ಲಿ ಆರ್.ಎಫ್.ಓ. ಸುರೇಶ ಕುಲೋಳ್ಳಿ, ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಾದ ಬಸುವರಾಜ ಪೂಜಾರ, ನಿಂಗಪ್ಪ ಕಲಾದಗಿ, ನಾಗರಾಜ ಕಲಾಲ, ರಮೇಶ ಸಜ್ಜನ, ಅರಣ್ಯ ರಕ್ಷಕರು ಹಾಗೂ ವೀಕ್ಷಕ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.