ಕಾಂತಾರದ ರೀತಿಯಲ್ಲೇ ದಿನದಿಂದ ದಿನಕ್ಕೆ ಜನಮನ ಗೆಲ್ಲುತ್ತಿರುವ “ಅಸ್ಮಿತಾಯ್” ಎಂಬ ಕೊಂಕಣಿ ಚಲನಚಿತ್ರ
ಮಾಂಡ ಸೋಬಾಣ ಮಂಗಳೂ‌ರು ಅವರು
ನಿರ್ಮಿಸಿದ್ದು ಈಗಾಗಲೇ ಬಿಡುಗಡೆ ಹೊಂದಿರುವ ಈ ಚಲನಚಿತ್ರ ಮಂಗಳೂರು ಹಾಗೂ ಉಡುಪಿಯಲ್ಲಿ ಭಾರೀ ಯಶಸ್ಸಿನತ್ತ ದಾಪುಗಾಲು ಇಡುತ್ತಿರುವುದು ವಿಶೇಷವಾಗಿದೆ.
ಕೊಂಕಣಿ ಭಾಷಿಗರು ಗೋವೆಯಲ್ಲಿ ಅನುಭವಿಸಿದ ಯಾತನೆಗಳು ಬಳಿಕ ಕರ್ನಾಟಕದ ಕರಾವಳಿಯ ಕಡೆಗೆ ಗೈಯ್ದ ಪಲಾಯನ ಇವೇ ಮೊದಲಾದ ಕಥಾ ಹಂದರ ಒಳಗೊಂಡ ಉತ್ತಮ ಅಭಿರುಚಿಯ ಚಲನ ಚಿತ್ರ ಇದಾಗಿದೆ. ಉತ್ತರಕನ್ನಡದ ಹೊನ್ನಾವರದಲ್ಲೂ ಇದು ಬಿಡುಗಡೆ ಹೊಂದಿದ್ದು ಕೊಂಕಣಿಗರೆಲ್ಲರೂ ನೋಡಲೇ ಬೇಕಾದ ಚಲನಚಿತ್ರ ಇದಾಗಿದೆ ವಿಶೇಷವೆಂದರೆ ಇದರ ನಿರ್ದೇಶಕ ವಿಲಾಸ್ ನಾಯಕ ಉತ್ತರ ಕನ್ನಡದ ಕುಮಟಾದ ಕೊಡಕಣಿ ಗ್ರಾಮದವರಾಗಿದ್ದು ಉತ್ತಮವಾದ ನಿರ್ದೇಶಕರೆಂಬ ಹೆಗ್ಗಳಿಕೆ ಈ ಚಲನಚಿತ್ರ ಇವರಗೆ ತಂದೊಡ್ಡಿದೆ.

RELATED ARTICLES  ರಸಾಯನಶಾಸ್ತ್ರ ರಾಷ್ಟ್ರೀಯ ವೆಬಿನಾರ್ ಕಾರ‍್ಯಕ್ರಮ ಸಂಪನ್ನ