ಕುಮಟಾ : ಭಟ್ಕಳದ ಶಿರಾಲಿಯಲ್ಲಿ ನಡೆದ 14 ರಿಂದ 17 ವಯೋಮಾನದೊಳಗಿನ , ಒಂಬತ್ತು ಜಿಲ್ಲೆಗಳ , ಬೆಳಗಾವಿ ವಿಭಾಗಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಮಟಾ ತಾಲೂಕಿನ ಜನತಾ ವಿದ್ಯಾಲಯ ಬಾಡದ ವಿದ್ಯಾರ್ಥಿಗಳು ಗದಗ, ಧಾರವಾಡ, ಬೆಳಗಾವಿ ಹಾಗೂ ಅಂತಿಮ ಪಂದ್ಯದಲ್ಲಿ ಶಿರಸಿ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ರಾಜ್ಯಮಟ್ಟವನ್ನು ಪ್ರವೇಶಿಸಿದೆ. ಆಮೂಲಕ ಸತತ ಪ್ರಯತ್ನ ಹಾಗೂ ಸೂಕ್ತ ತರಬೇತಿಯಿಂದ ಗ್ರಾಮೀಣ ಪ್ರತಿಭೆಗಳಿಂದಲೂ ಸಾಧನೆ ಸಾಧ್ಯ ಎಂಬುದನ್ನು ತಂಡವು ಸಾಬೀತು ಪಡಿಸಿದೆ.

RELATED ARTICLES  ಇಂದಿನ(ದಿ-21/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.


ಸಮರ್ಪಕ ಕ್ರೀಡಾಸೌಲಭ್ಯಗಳಿಲ್ಲದಿದ್ದರೂ, ಕೊರತೆಗಳ ಕುರಿತು ಗೊಣಗದೆ, ಮಳೆ-ಬಿಸಿಲು ಲೆಕ್ಕಿಸದೇ, ಸಮಯ ಗಣಿಸದೇ ಸ್ವಂತ ಮಕ್ಕಳಂತೆ ವಿದ್ಯಾಲಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಮಧುಕರ ಜೆ ನಾಯಕರ ಅವಿರತ ಶ್ರಮ ಈ ಗೆಲುವಿನ ಮೂಲಕ ಸಾರ್ಥಕ್ಯ ಕಂಡಿದೆ. ವಿದ್ಯಾರ್ಥಿಗಳನ್ನು ಹಾಗೂ ತಂಡದ ತರಬೇತುದಾರರನ್ನು ಮುಖ್ಯಾಧ್ಯಾಪಕರು, ಸಿಬ್ಬಂದಿಗಳು, ಆಡಳಿತ ಮಂಡಳಿಯವರು, ಊರನಾಗರಿಕರು, ಇಲಾಖೆಯ ಅಧಿಕಾರಿಗಳು, ಜಿಲ್ಲಾ ಜನಪ್ರತಿನಿಧಿಗಳು, ಇದೇ ವಾರದಲ್ಲಿ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ವಿಜಯಕ್ಕಾಗಿ ಶುಭ ಹಾರೈಸಿದ್ದಾರೆ.

RELATED ARTICLES  44 ವರ್ಷಗಳ ನಂತರ ಯಲ್ಲಾಪುರಕ್ಕೆ ಜಿಲ್ಲಾ ಸಮ್ಮೇಳನದ ಸಾರಥ್ಯ ಕುಮಟಾದಲ್ಲಿ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ.