ಅಂಕೋಲಾ : ಕಾರು ಹಾಗೂ ಹೋಂಡಾ ಡಿವೊ ನಡುವೆ ನಡೆದ ಅಪಘಾತದಲ್ಲಿ ಹೋಂಡಾ ಸವಾರ ಮೃತಪಟ್ಟರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಬಾಳಿಗುಳಿ ರಾಷ್ಟ್ರೀಯ ಹೆದ್ದಾರಿ 66ರ ಪೆಟ್ರೋಲ್ ‌ಬಂಕ್ ಸಮೀಪ ನಡೆದಿದೆ.

ಅಪಘಾತದಲ್ಲಿ ಹೋಂಡಾ ಡಿವೊ ಹಿಂಬದಿ ಸವಾರ ಉದಯ ನಾರಾಯಣ ನಾಯ್ಕ (58) ಮೃತ ವ್ಯಕ್ತಿಯಾಗಿದ್ದಾರೆ.ಮೃತ ವ್ಯಕ್ತಿ ಕಾರವಾರ ನಗರದ ಗುರುಮಠ ನಿವಾಸಿ ಎಂದು ಗೊತ್ತಾಗಿದೆ. ಇವರು ಕಾರವಾರದ ಕೆನರಾ ಬ್ಯಾಂಕನ್ ನಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಕಾರವಾರದಿಂದ ಅಂಕೋಲಾ ಕಡೆ ಬರುತ್ತಿದ್ದಾಗ ಅವರ ಹಿಂಬದಿಯಿಂದ ಬಂದ ಕಾರು ಚಾಲಕ ಹೋಂಡಾ ಡಿವೊ ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಉದಯ ನಾಯ್ಕ ಅವರ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

RELATED ARTICLES  ಅಂಗಳದಲ್ಲಿ ಒಣಗಿಸಿ ಇಟ್ಟಿದ್ದ ಅಡಿಕೆ ಚೀಲ ಕದ್ದ ಕಳ್ಳರು.

ಕಾರು ಚಾಲಕ ಧಾರವಾಡ ಜಿಲ್ಲೆಯ ನವಗುಂದ ನಿವಾಸಿ ಪ್ರಶಾಂತ ವೀರಪ್ಪ ಮೇಣಸಿನಕಾಯಿ ವಿರುದ್ಧ ಅಂಕೋಲಾ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಚಿತ್ರೋತ್ಸವ ಸಪ್ತಾಹ:ನಾಳೆ ಕೊನೆಯ ಚಿತ್ರ ಮಾರಿಕೊಂಡವರು