ಕುಮಟಾ : ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ಉತ್ತರಕನ್ನಡ ಹಾಗೂ ಡಿ.ಎಸ್.ಇ.ಆರ್.ಟಿ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ೨೦೨೩-೨೪ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜಿಲ್ಲಾ ಮಟ್ಟದ ವಿಜ್ಞಾನ ಕಾರ್ಯಕ್ರಮದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್‌ಕೆ ಪ್ರೌಢಶಾಲೆಯ ಕೃತಿಕಾ ಭಟ್ಟ ಇವಳು ವಿಜ್ಞಾನ ಶಿಕ್ಷಕಿಯರಾದ ಅಮಿತಾ ಗೋವೆಕರ್ ಹಾಗೂ ಜ್ಯೋತಿ ಪಟಗಾರ ಮಾರ್ಗದರ್ಶನದಲ್ಲಿ ಸಿರಿಧಾನ್ಯಗಳು ಅದ್ಭುತ ಆಹಾರ ಹಾಗೂ ರೂಢಿಗತ ಪಥ್ಯಾಹಾರ ಎಂಬ ವಿಷಯದಡಿ ಮಂಡಿಸಿದ ವಿಚಾರಕ್ಕೆ ಪ್ರಥಮ ಸ್ಥಾನ ದಕ್ಕುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿಯರು, ಶಿಕ್ಷಕರು, ಪಾಲಕರು ಹಾರೈಸಿ ಮುಂದಿನ ಹಂತದ ಸ್ಪರ್ಧೆಗೆ ಶುಭಕೋರಿದ್ದಾರೆ.