ಕುಮಟಾ : ತಾಲೂಕಿನ ಕೋಟೆಗುಡ್ಡೆ ಶಾಲೆಯಲ್ಲಿ ಕಳೆದ 17 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಭಟ್ಕಳ ತಾಲೂಕಿಗೆ ವರ್ಗಾವಣೆಯಾಗಿರುವ ರೇಣುಕಾ ಎನ್. ಹೆಗಡೆಯವರನ್ನು ಊರಿನ ನಾಗರೀಕರು ಹಾಗೂ ಶಿಕ್ಷಕ ವೃಂದದವರು ಆತ್ಮೀಯವಾಗಿ ಗೌರವಿಸಿ, ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ರೇಣುಕಾ ಹೆಗಡೆಯವರು ಊರಿನ ಜನರ ಅಭಿಮಾನ, ಅವರು ತೋರಿದ ಪ್ರೀತಿ, ಗೌರವ ಹಾಗೂ ಶಾಲೆ ಮತ್ತು ಶಿಕ್ಷಣದ ಕುರಿತಾಗಿ ಊರಿನ ಜನರಿಗಿರುವ ಕಾಳಜಿಯನ್ನು ಸ್ಮರಿಸುತ್ತಾ, ತನ್ನ ಕೆಲ ಅನುಭವಗಳನ್ನು ಹಂಚಿಕೊಂಡರು. ತಾನು ವರ್ಗವಾಗಿ ಹೋದರೂ ಯಾವುದೇ ಸಂದರ್ಭದಲ್ಲಿಯೂ ಈ ಶಾಲೆಗೆ ತನ್ನ ಅವಶ್ಯಕತೆ ಇದ್ದಲ್ಲಿ ಸ್ಪಂದಿಸಲು ಸದಾ ಸಿದ್ಧನಿದ್ದೇನೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಯ ಅಧ್ಯಕ್ಷ ಈಶ್ವರ ಮುಕ್ರಿ, ಕಲಾಬಳಗದವರಾದ ಹನುಮಂತ ಮುಕ್ರಿ, ದಾನಿಗಳಾದ ಶಿವಾನಂದ ಭಟ್ಟ, ಉಮೇಶ ಹೆಗಡೆ ಹಾಗೂ ಇತರರು ಇದ್ದರು.