ಕುಮಟಾ : ತಾಲೂಕಿನ ರೋಟರಿ ನಾದಶ್ರೀ ಕಲಾಕೇಂದ್ರದಲ್ಲಿ ಶ್ರೀಕೃಷ್ಣನು ತಾನು ಪುಟ್ಟ ಮಗುವಾಗಿದ್ದಾಗ, ನಾನಾ ರೀತಿಯ ಲೀಲೆಗಳಿಂದ ಯಶೊದಾ ಮಾತೆಗೆ ಅಪಾರ ಆನಂದ ನೀಡುತ್ತಿದ್ದ ಘಟನೆಗಳ ಸುತ್ತ ರಮಣೀಯ ನಿರೂಪಣೆಯಿಂದ ಅಭಿಯನಿಸಲ್ಪಟ್ಟ ಅರಮನೆಯಾಗಿ ಮಾರ್ಪಟ್ಟಿತ್ತು. ರೋಟರಿ ಏನ್ಸ್ ಕ್ಲಬ್‍ನವರು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಸಿದ ತಾಲೂಕಿನಲ್ಲಿಯೇ ಪ್ರಥಮವೆಂಬ ಯಶೋದಾ ಕೃಷ್ಣ ಸ್ಪರ್ಧೆ ಕಾರ್ಯಕ್ರಮ ನೆರೆದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತು.  

ವೈಷ್ಣವಿ ಮತ್ತು ಗಾಯತ್ರಿ ಶೇಟ್ ಪ್ರಥಮ ಸ್ಥಾನ, ಅತ್ರೇಯ ಮತ್ತು ದೀಪಾ ಯೋಗೇಶ್ ಕೋಡ್ಕಣಿ ದ್ವಿತೀಯ, ಚಿನ್ಮಯ್ ಮತ್ತು ಸ್ಮಿತಾ ನಾಗರಾಜ ನಾಯ್ಕ ತೃತೀಯ  ಹಾಗೂ ಅವನಿ ಮತ್ತು ಸಂಜನಾ ಅಮರ ಶೆಟ್ಟಿ ಅವರು ಚತುರ್ಥ ಬಹುಮಾನಗಳಿಂದ ಪುರಸ್ಕೃತರಾದರು.  

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ಸಂಭ್ರಮದ ೭೪ನೇ ಗಣರಾಜ್ಯೋತ್ಸವ ಆಚರಣೆ

ಬಹುಮಾನವು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಗಿಫ್ಟ್ ಹ್ಯಾಂಪರ್ ಒಳಗೊಂಡಿತ್ತು.  ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹಾಂಗ್ಯೋ ಐಸ್ಕ್ರೀಂ, ಆಭರಣ ಜ್ಯುವೆಲರ್ಸ್ ಹಾಗೂ ವಾತ್ಜಾತ್ ಫಾರ್ಮಾ ಫುಡ್ಸ್ ವಹಿಸಿದ್ದರು. ನಿವೃತ್ತ ಶಿಕ್ಷಕ, ಕಲಾವಿದ ಹರಿಶ್ಚಂದ್ರ ಗುನಗಾ, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷೆ ವಿದ್ಯಾ ಶೇಟ್ ಮತ್ತು ಸಾಹಿತಿ, ಕಲಾವಿದ ಮೋಹನ್ ನಾಯ್ಕ ಕೂಜಳ್ಳಿ ಅತ್ಯುತ್ತಮ ನಿರ್ಣಯ ನೀಡಿದ್ದಲ್ಲದೇ, ನಿರ್ಣಯದ ಮಾನದಂಡಗಳನ್ನು ಸಭೆಗೆ ಪ್ರಸ್ತುತ ಪಡಿಸಿದರು. 

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ರೋಟರಿ ಅಧ್ಯಕ್ಷ ಎನ್. ಆರ್. ಗಜು, ಕಾರ್ಯದರ್ಶಿ ರಾಮದಾಸ ಗುನಗಿ, ಕೋಶಾಧ್ಯಕ್ಷ ಸಂದೀಪ ನಾಯಕ ಹಾಗೂ ಏನ್ಸ್ ಅಧ್ಯಕ್ಷೆ ವಿಜಯಲಕ್ಷ್ಮಿ ನಾಯ್ಕ, ಕಾರ್ಯದರ್ಶಿ ಶೈಲಾ ಗುನಗಿ, ಕೋಶಾಧ್ಯಕ್ಷೆ ಶ್ರದ್ಧಾ ನಾಯಕ, ರೋಟರಿಯ ಮಾಜಿ ಅಧ್ಯಕ್ಷರಾದ ಸುರೇಶ್ ಭಟ್, ಚೇತನ್ ಶೇಟ್ ಬಹುಮಾನ ವಿತರಿಸಿದರು. ಯೋಗೇಶ್ ಕೋಡ್ಕಣಿ ನಿರೂಪಿಸಿದರು. ರಾಮದಾಸ್ ಗುನಗಿ ವಂದಿಸಿದರು. ಸಂಸ್ಥೆಯ ಸದಸ್ಯರಾದ ದೀಪಾ ನಾಯಕ, ರಾಜೇಶ್ವರಿ ಹೆಗಡೆ, ಪವನ ಶೆಟ್ಟಿ ಸಹಕರಿಸಿದರು.