ಕುಮಟಾ : ಇತ್ತೀಚೆಗೆ ನಿಧನರಾದ ಕುಮಟಾ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ವೆಂಕಟೇಶ ಶಂಭು ನಾಯ್ಕ ಅವರ ಮನೆಗೆ
ಕಾಂಗ್ರೆಸ್ ಮುಖಂಡ ಮತ್ತು ಜಿ.ಪಂ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ನೊಂದ ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ವೆಂಕಟೇಶ ನಾಯ್ಕರ ನಿಧನದಿಂದ ನಮಗೂ ಅತೀ ದುಃಖವಾಗಿದೆ, ನೀವುಗಳು ದೃತಿಗಡುವ ಅಗತ್ಯವಿಲ್ಲ. ನಿಮ್ಮ ಕುಟುಂಬದ ಸದಸ್ಯರಂತೆ ನಾವಿದ್ದೇವೆ ಎಂದು ಕುಟುಂಬದವರಿಗೆ ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ರತ್ನಾಕರ ನಾಯ್ಕ ನೊಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಹೆಗಡೆ ಘಟಕಾಧ್ಯಕ್ಷ ಲಕ್ಷ್ಮೀಕಾಂತ ಇದ್ದರು.