ಗಂಗಾವಳಿ: ವಿರಾಟ ಹಿಂದೂ ಯುವಕ ಸಂಘ ಗಂಗಾವಳಿ ಹಾಗೂ ಶ್ರೀ ಗಂಗಾಮಾತಾ ದೇವಸ್ಥಾನ ಆಡಳಿತ ಸಮಿತಿ ಅವರ ಆಶ್ರಯದಲ್ಲಿ ಗಂಗಾವಳಿಯ ಗಂಗಾಮಾತಾ ದೇವಾಲಯದ ಆವರಣದಲ್ಲಿ ಶ್ರೀ ಗಂಗಾಷ್ಟಮಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಶ್ರೀ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಮಹಾದೇವ ಅಂಬಿಗ ಸ್ವಾಮಿಗಳು ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

ಈ ಕಾರ್ಯಕ್ರಮವನ್ನು ಶಾಸಕರಾದ ಶಾಸಕಿ ಶಾರದಾ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮೀನುಗಾರರೇ ಹೆಚ್ಚಾಗಿರುವ ಈ ಬಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲೂ ಈ ಭಾಗದ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯತಸದಸ್ಯರಾದ ಪ್ರದೀಪ ನಾಯಕ ದೇವರಭಾವಿ ಅವರು ಮಾತನಾಡಿ ಕಳೆದ 70 ವರ್ಷಗಳಿಂದ ಈ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ತೃಪ್ತಿದಾಯಕವಾಗಿಲ್ಲ. ಇದುವರೆಗೂ ರಾಜ್ಯಭಾರ ಮಾಡಿದ ಸರಕಾರ & ಜನಪ್ರತಿನಿಧಿಗಳು ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
IMG 20171012 WA0035
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಯವರು ಮಾತನಾಡಿ ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಪ್ರಥಮದಲ್ಲೇ ಗಂಗಾನದಿಯನ್ನು ಸ್ವಚ್ಛಗೊಳಿಸುವ ಹಾಗೂ ಮೀನುಗಾರ ಸಮುದಾಯಕ್ಕೆ ಮಹತ್ವ ನೀಡಿ ಮೀನುಗಾರ ಸಮುದಾಯವನ್ನು ಗುರುತಿಸಿ ಮುಂಚೂಣಿಯಲ್ಲಿ ತರುವ ಪ್ರಯತ್ನವನ್ನೂ ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು. ಅಂಬಿಗ ಸಮುದಾಯದ ಯುವಕರು ಇತರೇ ಮೀನುಗಾರ ಸಮುದಾಯವರನ್ನೂ ಒಗ್ಗೂಡಿಸಿಕೊಂಡು ಸಂಘಟಿತರಾಗಿ ತಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಎಲ್ಲ ಮೀನುಗಾರ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಹಾಲಕ್ಕಿ ಸಮಾಜವನ್ನೂ ಕೂಡಾ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತಾಗಬೇಕು. ಆಗ ಮಾತ್ರ ಹಿಂದುಳಿದ ವಿದ್ಯಾರ್ಥಿಗಳೂ ಕೂಡಾ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಅಭಿವೃದ್ಧಿ ಕೇವಲ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣಗಳಿಗೆ ಸೀಮಿತವಾಗಿರಬಾರದು. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಸ್ಮಶಾನ ಭೂಮಿಯನ್ನು ಅಭಿವೃದ್ಧಿ ಪಡಿಸದೇ ಇರುವುದು ನಾಚಿಕೆಗೇಡಿನ ಸಂಗತಿ. ಈ ಭಾಗದಲ್ಲಿನ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸವಾಗಬೇಕಾಗಿದೆ ಹೊರತು ಕೇವಲ ಭರವಸೆಗಳಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗದು ಎಂದು ನುಡಿದರು.

RELATED ARTICLES  ಕುಮಟಾಕ್ಕೆ ನಿವೇದಿತ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ಘೋಷಣೆ

ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ರಾಜಗೋಪಾಲ ರೆಡ್ಡಿ,ಗಾಯತ್ರಿ ಗೌಡ, ರಾಜೇಶ ನಾಯಕ, ಶ್ರೀನಿವಾಸ ದೇವಣ್ಣ ನಾಯಕ, ಗಣಪತಿ ಅಂಬಿಗ, ನಾಗಪ್ಪ ಅಂಬಿಗ,ಎಚ್. ಎಮ್. ದಂಡಿನ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಯಕ್ಷ ಬ್ರಹ್ಮನ ಪಾರ್ಥಿವ ಶರೀರ ಕಂಡು ಭಾವುಕರಾದ ಗಣ್ಯರು.

ಡಾ|| ಎಸ್. ಕೆ. ಮೇಲ್ಕಾರ ರವರು ಪ್ರಾಸ್ತಾವಿಕ ಉಪನ್ಯಾಸ ನೀಡಿದರು. ಆರ್.ಕೆ ಅಂಬಿಗ ನಿರೂಪಿಸಿದರು. ಸುನೀಲ ಅಂಬಿಗ ವಂದಿಸಿದರು.