ಶಿರಸಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 2.25 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಶಿರಸಿಯ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಶಿರಸಿ ತಾಲ್ಲೂಕಿನ ನರೂರು ಗ್ರಾಮದಲ್ಲಿ ನಡೆದಿದೆ.
ಆರೋಪಿ ನರೂರಿನ ಸದಾನಂದ ಬಸಪ್ಪ ಗೌಡ ತನ್ನ ಮನೆಯ ಹಿಂದೆ 65 ಕೆ.ಜಿ ಶ್ರೀಗಂಧದ 15 ತುಂಡುಗಳನ್ನು ದಾಸ್ತಾನಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು.

RELATED ARTICLES  ಗುಡುಗುಡಿ ಆಟ ತಡೆಯಲು ಮುಂದಾದ ತಾಲೂಕು ಪಂಚಾಯಿತಿ ಸದಸ್ಯನ ಮೇಲೆಯೇ ಹಲ್ಲೆ?

ಅರಣ್ಯ ಸಂಚಾರಿ ದಳದ ಡಿಎಫ್‌ಒ ಅಬ್ದುಲ್ ಅಜೀಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ.ವಾಲಿ ಮಾರ್ಗದರ್ಶನದ ಮೇರೆಗೆ ಆರ್ ಎಫ್ ಒ ಅಜಯ ನಾಯ್ಕ, ಸಿಬ್ಬಂದಿ ಇಲಿಯಾಸ್ ಆಯ್ ಶೇಖ್,‌ ರಾಜು ಪೂಜಾರ, ಚಿದಂಬರ ಗೌಡ, ನಂದೀಶ ಗಾಡೀಗೇರ ಚುರುಕಿನ ಕಾರ್ಯಾಚರಣೆ ನಡೆಸಿದ್ದರು. ಈ ಘಟನೆಯಲ್ಲಿ
ಆರೋಪಿಯು ತಲೆಮರೆಸಿಕೊಂಡಿದ್ದು ಶೋಧನಾ ಕಾರ್ಯ ನಡೆದಿದೆ.

RELATED ARTICLES  ಸ್ಕೂಟಿಯಿಂದ ಆಯತಪ್ಪಿ ಬಿದ್ದ ಮಹಿಳೆ ಸಾವು..!